ಕಾನಹೊಸಹಳ್ಳಿಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಭಾನುವಾರ ಡಿ.ದೇವರಾಜ ಅರಸು ಜನ್ಮದಿನ ಆಚರಿಸಲಾಯಿತು.  
ಜಿಲ್ಲೆ

ತಳ ಸಮುದಾಯದ ಧ್ವನಿಯಾಗಿ ಡಿ.ದೇವರಾಜ ಅರಸು ಸೇವೆ

ಶಶಿಧರ ಎಲ್

ಕಾನಹೊಸಹಳ್ಳಿ: ರಾಜ್ಯದಲ್ಲಿ ಬಡವ, ನಿರ್ಗತಿಕ, ತಳ ಸಮುದಾಯದ ಶಕ್ತಿ ಮತ್ತು ಧ್ವನಿಯಾಗಿ ಡಿ.ದೇವರಾಜ ಅರಸು ಸೇವೆ ಸಲ್ಲಿಸಿದರು ಎಂದು ನಿಲಯ ಪಾಲಕಿ ಸಹನಾ ಸಿ.ಅರ್. ಹೇಳಿದರು.

ಪಟ್ಟಣದ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಭಾನುವಾರ ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅರಸು ಅವರು ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದವರಲ್ಲಿ ಒಬ್ಬರು.

ಭೂ ಮಾಲೀಕತ್ವದ ವಿರುದ್ಧ ಧ್ವನಿಯಾಗಿ ಬಡವರು ಮತ್ತು ಗೇಣಿದಾರರಿಗೆ ಉಳುವವನೇ ಭೂ ಒಡೆಯ ಎಂಬ ಕಾಯ್ದೆ ಜಾರಿ ತಂದರು. ಅಲ್ಲದೆ, ಶೋಷಿತ ಸಮುದಾಯಗಳ ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಸಮಾಜದ ಮುಖವಾಹಿನಿಗೆ ತರಲು ಶ್ರಮಿಸಿದರು ಎಂದರು.ಪ್ರಮುಖರಾದ ಅರ್ಚನಾ, ರಾಜೇಶ್ವರಿ, ರತ್ನಮ್ಮ ಇತರರಿದ್ದರು.