Basavaraj Bommai 
ಜಿಲ್ಲೆ

ಸಿಡಿ ಲೇಡಿಯ ಮೂರನೇ ವಿಡಿಯೋ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದೇನು?

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಯಾರೇ ದೂರು ನೀಡಿದರೂ ಎಸ್ ಐಟಿಯವರು ಕಾನೂನು ರೀತ್ಯ ಕ್ರಮಕೈಗೊಳ್ಳುತ್ತಾರೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ವಿಧಾನ ಸೌಧದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಡಿ ಯುವತಿ 3ನೇ ವಿಡಿಯೋ ಬಿಡುಗಡೆ, ದೂರು ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದರು.

ಸ್ವತಃ ಯುವತಿಯೇ ಬರಲಿ ಇಲ್ಲವೇ ಅವರ ವಕೀಲರು ಮತ್ತಿನ್ಯಾರೇ ಬಂದು ದೂರು ಕೊಟ್ಟರೂ ಎಸ್ ಐಟಿ ಸ್ವೀಕರಿಸಿ ಕಾನೂನು ಪ್ರಕಾರ ಕ್ರಮವಹಿಸುತ್ತದೆ. ಯುವತಿಗೆ ಮತ್ತವರ ಪಾಲಕರಿಗೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವೆ ಎಂದರು.

ಭದ್ರತೆಯೊಂದಿಗೆ ದೂರು ನೀಡಲು ಬರುವುದಾದರೆ ಸೂಕ್ತ ರಕ್ಷಣೆ ಸರ್ಕಾರ ಸಿದ್ಧವಿದೆ. ಅವರು ಎಲ್ಲಿದ್ದಾರೋ ಹುಡುಕಿ, ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿರುವೆ. ಯುವತಿಗಾಗಲಿ, ಅವರ ಪಾಲಕರಿಗಾಗಲಿ ಆತಂಕ ಬೇಡವೆಂದು ಬೊಮ್ಮಾಯಿ ಅಭಯ ನೀಡಿದರು.