ಮುದಗಲ್‌ನಲ್ಲಿ ಸುಮಂಗಲೆಯರಿಂದ ಬುತ್ತಿ ಮೆರವಣಿಗೆ ಜರುಗಿತು. ನಂದವಾಡಗಿಯ ಚನ್ನಬಸವ ಶ್ರೀಗಳು, ಪ್ರಮುಖರಾದ ಶಶಿಕಲಾ ಭೋವಿ, ಸುವರ್ಣ ಸುಂಕದ, ತೋಟಮ್ಮ, ಶಿವಲೀಲಾ ಗದ್ದಿ ಇತರರಿದ್ದರು. 
ಜಿಲ್ಲೆ

ಬಸವ ಬುತ್ತಿ ಮೆರವಣಿಗೆ ಅದ್ದೂರಿ

Kopala - Desk - Eraveni

ಮುದಗಲ್: ಇಲ್ಲಿನ ಕುಂಬಾರ ಪೇಟೆಯ ಬಸವೇಶ್ವರ ದೇವಸ್ಥಾನದ ಜಾತ್ರೆ ಹಾಗೂ ಸಜ್ಜಲಗುಡ್ಡದ ಶರಣಮ್ಮ ಪುರಾಣ ಪ್ರವಚನ ನಿಮಿತ್ತ ಸೋಮವಾರ ಸುಮಂಗಲೆಯರಿಂದ ಬಸವ ಬುತ್ತಿಯ ಮೆರವಣಿಗೆ ಜರುಗಿತು.

ನೀಲಕಂಠೇಶ್ವರ ದೇವಸ್ಥಾನದಲ್ಲಿ 105 ಜನ ಸುಮಂಗಲೆಯರು ಬುತ್ತಿಯನ್ನು ತಂದು ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಗೆ ಪುರಾಣ ಪ್ರವಚನಕಾರ ನಂದವಾಡಗಿ ಅಭಿನವ ಚನ್ನಬಸವ ಮಹಾಸ್ವಾಮಿ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬಾಜಾ ಭಜಂತ್ರಿಗಳೊಂದಿಗೆ ಸಂಚರಿಸಿ ಚಾವಡಿ ಕಟ್ಟೆ ಮೂಲಕ ಬಸವೇಶ್ವರ ದೇವಸ್ಥಾನದ ಪುರಾಣ ಪ್ರವಚನ ಸ್ಥಳಕ್ಕೆ ಕರೆದೊಯ್ಯಲಾಯಿತು.

ನಂದವಾಡಗಿ ಚನ್ನಬಸವ ಶ್ರೀಗಳು ಮಾತನಾಡಿ, ಸಜ್ಜಲಗುಡ್ಡ ಶರಣಮ್ಮ ಪ್ರವಚನದಲ್ಲಿ ಬಸವ ಬುತ್ತಿಯ ವಿಷಯ ಬರುತ್ತಿರುವ ಕಾರಣ ಸುಮಂಗಲೆಯರು ಮನೆಯಿಂದ ಬುತ್ತಿ ಕಟ್ಟಿಕೊಂಡು ಬಂದಿದ್ದಾರೆ. ಅನ್ನಪೂರ್ಣೆಶ್ವರಿ ಪ್ರತಿಯೊಬ್ಬರ ಮನೆಯಲ್ಲಿ ಸಂಪದ್ಭರಿತವಾಗಿ ನೆಲೆಯೂರಲಿ ಎನ್ನುವದೇ ಸಜ್ಜಲಗುಡ್ಡದ ತಾಯಿಯವರ ಮೂಲಕ ಬರಲಿ ಎನ್ನುವುದೇ ಇದರ ಉದ್ದೇಶ ಎಂದು ತಿಳಿಸಿದರು.