ಕಾಸರಗೋಡು: ಬಂಟರ ಸಂಘದ ಮಧೂರು ಸಮಿತಿಯ ಮಹಿಳಾ ವಿಭಾಗದ ಶ್ರೀ ದುರ್ಗಾ ಮಹಿಳಾ ಬಂಟರ ಭಜನಾ ಮಂಡಳಿಗೆ ಭಾನುವಾರ ಪರಕ್ಕಿಲದಲ್ಲಿರುವ ಮಧೂರು ಬಂಟರ ಸಂಘದ ಬಯಲು ರಂಗ ಮಂದಿರದಲ್ಲಿ ಚಾಲನೆ ನೀಡಲಾಯಿತು.
ಗೌರವ ಅಧ್ಯಕ್ಷೆ ನಾಟಿ ವೈದ್ಯೆ ಯಮುನಾ ಎಸ್.ಶೆಟ್ಟಿ ಮತ್ತು ಕಾರ್ಯಧ್ಯಕ್ಷೆ ಶ್ಯಾಮಲಾ ಎಂ.ಶೆಟ್ಟಿ ಭಜನಾ ಮಂಡಳಿಗೆ ಚಾಲನೆ ನೀಡಿದರು. ಶೈಲಜಾ ಪಿ.ಶೆಟ್ಟಿ ಮಾಯಿಪಾಡಿ ಸಂಚಾಲಕಿಯಾಗಿರುವ ಸಮಿತಿಯಲ್ಲಿ ಶೋಭಾ ಕೊಲ್ಯ ಮತ್ತು ಸುಜಾತಾ ಕಜೆ ಸಹ ಸಂಚಾಲಕಿಯರಾಗಿರುವರು. ಸುಜಾತಾ ಕೊಲ್ಯ, ರಾಜೀವಿ ಕೊಲ್ಯ, ದೇವಕಿ ರೈ ಗಂಗೆ, ರಾಜೀವಿ ಗಂಗೆ, ವಿನೋದಾ, ಶ್ರೀದೇವಿ ಗಂಗೆ, ಸವಿತಾ ಮಾಯಿಪ್ಪಾಡಿ, ಜಯಲಕ್ಷ್ಮಿಕೂಡ್ಲು, ಸುಮನಾ ಕೂಡ್ಲು, ಯಮುನಾ, ಮಾಲತಿ ಮಣ್ಣಿಪ್ಪಾಡಿ, ಶ್ಯಾಮಲಾ ಹಾಗೂ ಶೋಭಾ ಸದಸ್ಯೆಯರಾಗಿದ್ದಾರೆ.
ರೋಹಿತಾಕ್ಷಿ ಬಿ.ರೈ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಆಳ್ವ ಕುಚ್ಚಿಕ್ಕಾಡು, ಬಂಟರ ಸಂಘದ ಮಧೂರು ಸಮಿತಿ ಅಧ್ಯಕ್ಷ ರಾಮಕೃಷ್ಣ ಆಳ್ವ ಕುತ್ತಾರ್ ಗುತ್ತು, ಕಾರ್ಯದರ್ಶಿ ಗಣೇಶ್ ರೈ ನಾಯಕೋಡು, ಪದಾಧಿಕಾರಿಗಳಾದ ಅಶೋಕ್ ರೈ ಸೂರ್ಲು, ಬಾಲಕೃಷ್ಣ ರೈ ಗಂಗೆ, ಸಂತೋಷ್ ರೈ ಗಂಗೆ, ಸತೀಶ್ ಆಳ್ವ ಕುಚ್ಚಿಕ್ಕಾಡ್, ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ, ಬಾಲಕೃಷ್ಣ ಮಧೂರು ಉಪಸ್ಥಿತರಿದ್ದರು.