ಶಿರ್ವ: ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜುನಲ್ಲಿ ನಡೆದ ಯಕ್ಷೋತ್ಸವ ಯಕ್ಷಗಾನ ಸ್ಪರ್ಧೆಯಲ್ಲಿ ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಯಕ್ಷಸಿಂಚನ ಯಕ್ಷಗಾನ ತಂಡ ದ್ವಿತೀಯ ಬಹುಮಾನ ಗಳಿಸಿದೆ.
ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಕಾಲೇಜಿನ ಒಟ್ಟು ಹತ್ತು ತಂಡ ಭಾಗವಹಿಸಿದ್ದವು. ವಿದ್ಯಾರ್ಥಿಗಳ ತಂಡ ಯಕ್ಷ ಗುರು ರಾಕೇಶ್ ರೈ ಅಡ್ಕ ಮಾರ್ಗದರ್ಶನದಲ್ಲಿ ಸುದರ್ಶನ ವಿಜಯ ಎಂಬ ಪ್ರಸಂಗ ಪ್ರದರ್ಶಿಸಿದ್ದು, ವೈಯಕ್ತಿಕವಾಗಿ ಶ್ರೀಶ ಅವರ ಸ್ತ್ರೀ ವೇಷಕ್ಕೆ ಹಾಗೂ ವಿಧಿಶ ನೆಲ್ಲಿ ಅವರ ಶತ್ರು ಪ್ರಸೂದನ ವೇಷಕ್ಕೆ ದ್ವಿತೀಯ ಬಹುಮಾನ ದೊರಕಿದೆ.