ಗೋರೆಬಾಳ ಸಮೀಪದ ಬಂಗಾರಿಕ್ಯಾಂಪಿನ ಸಿದ್ಧಾಶ್ರಮದಲ್ಲಿ ಗಣೇಶ ಗಾಯತ್ರಿ ಮಾತೆಯ ಜಾತ್ರೋತ್ಸವ ಹಿನೆಲೆಯಲ್ಲಿ ಗಂಗಾರತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. 
ಜಿಲ್ಲೆ

ಬಂಗಾರಿ ಕ್ಯಾಂಪಿನಲ್ಲಿ ಗಂಗಾರತಿ

Kopala - Desk - Eraveni

ಗೊರೇಬಾಳ: ಬಂಗಾರಿಕ್ಯಾಂಪಿನ ಶ್ರೀ ಗಣೇಶ ಗಾಯತ್ರಿ ಮಾತಾದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಸಿದ್ಧಾಶ್ರಮದಲ್ಲಿ ಗಂಗಾರತಿ ಕಾರ್ಯಕ್ರಮ ನಡೆಯಿತು. ಗಣೇಶ ಗಾಯತ್ರಿ ಮಾತೆ ಹಾಗೂ ಗಂಗೆ ಪ್ರತಿಷ್ಠಾಪಿತ ಸ್ಥಳದಲ್ಲಿ ಪೂಜೆ ಸಲ್ಲಿಸಲಾಯಿತು.

ಸಿದ್ದಾಶ್ರಮದ ಸದಾನಂದ ತಾತ ಆಶೀರ್ವಚನ ನೀಡಿದರು. ಭಕ್ತರು ದೀಪ ಬೆಳಗುವ ಮೂಲಕ ಗಂಗಾರತಿ ಕಾರ್ಯಕ್ರಮದಲ್ಲಿ ಭಾಗಿಯಾದರು. ಬಂಗಾರಿಕ್ಯಾಂಪ್ ಸಿದ್ದಾಶ್ರಮದ ಡಾ.ಸಿದ್ದರಾಮೇಶ್ವರ ಶರಣರು, ಬೊಮ್ಮನಾಳ ಹಿರೇಮಠದ ಶ್ರೀ ಸಿದ್ದರಾಮ ಶಾಸ್ತ್ರಿ,

ಗೊರೇಬಾಳ ಕ್ಯಾಂಪ್ ಮರುಳಸಿದ್ಧಾಶ್ರಮದ ಡಾ.ಸಿದ್ದಯ್ಯ ತಾತ, ಹೆಬ್ಬಾಳ ರೇಣುಕಾಶ್ರಮದ ಶರಣಯ್ಯ ತಾತ, ಡಿ.ನಾಗೇನಹಳ್ಳಿ ಹಿರೇಮಠದ ರುದ್ರಮುನಿಸ್ವಾಮಿ, ಮರುಳ ಸಿದ್ಧಾಶ್ರಮದ ನಂಜುಂಡಯ್ಯ ತಾತ, ಚನ್ನಪ್ಪ ತಾತ, ಕುಮಾರಸ್ವಾಮಿ, ಚಿದಾನಂದಪ್ಪ ಗೊರೇಬಾಳ, ಶಾಂತವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ಉಮಳಿಹೊಸೂರು ಇದ್ದರು.