ಕಂಪ್ಲಿ ಸಮೀಪದ ಬುಕ್ಕಸಾಗರದ ಏಳುಹೆಡೆ ನಾಗಪ್ಪ ದೇವಸ್ಥಾನ ಬಳಿ ತುರ್ತು ಕಾಲುವೆಯಲ್ಲಿ ನೀರು ಹರಿಯುತ್ತಿರುವುದು. 
ಬಳ್ಳಾರಿ

ತುರ್ತು ಕಾಲುವೆ ಹರಿದ ನೀರು

ಶಶಿಧರ ಎಲ್

ಪ್ರಮುಖ ಮುಖ್ಯಾಂಶಗಳು

  • ಗುಂಡ್ಲುಕೆರೆ ಎಸ್ಕೇಪ್ ಗೇಟ್‌ನಿಂದ ಹರಿದ ನೀರು
  • ವಿಜಯವಾಣಿಯಲ್ಲಿ ‘ತುರ್ತು ಕಾಲುವೆಗೆ ನೀರು ಹರಿಸಿ’ ಶೀರ್ಷಿಕೆಯಡಿ ವರದಿ ಪ್ರಕಟ
ಕಂಪ್ಲಿ: ಗುಂಡ್ಲುಕೆರೆ ಎಸ್ಕೇಪ್ ಗೇಟ್‌ನಿಂದ ಹೊಸಪೇಟೆ ತಾಲೂಕಿನ ಬುಕ್ಕಸಾಗರ ಗ್ರಾಮದ ತುರ್ತು ಕಾಲುವೆಗೆ ಭಾನುವಾರ ಸಂಜೆ ನೀರು ಹರಿಸಲಾಯಿತು. ಕಳೆದ 10 ದಿನಗಳಿಂದ ನೀರು ಹರಿಯದ ಹಿನ್ನೆಲೆಯಲ್ಲಿ ಬೆಳೆಗೆ ತೊಂದರೆಯಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.
ಈ ಕುರಿತು ಭಾನುವಾರ ‘ವಿಜಯವಾಣಿ’ಯಲ್ಲಿ ‘ತುರ್ತು ಕಾಲುವೆಗೆ ನೀರು ಹರಿಸಿ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದರಿಂದಾಗಿ ನೀರಾವರಿ ಇಲಾಖೆ ಅಧಿಕಾರಿಗಳು ನೀರು ಹರಿಸಿದ್ದಾರೆ.