ಜಿಲ್ಲೆ

ಬಳ್ಳಾರಿ ಸರ್ಕಾರಿ ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಜತೆ ಅಧಿಕಾರಿಯ ರೋಮ್ಯಾನ್ಸ್​: ವಿಡಿಯೋ ವೈರಲ್​!

ಬಳ್ಳಾರಿ: ಸರ್ಕಾರಿ ಕಚೇರಿಯಲ್ಲೇ ಅಧಿಕಾರಿಯೋರ್ವ ಮಹಿಳಾ ಸಿಬ್ಬಂದಿಯ ಜತೆ ರೋಮ್ಯಾನ್ಸ್​ ಮಾಡಿರುವ ವರ್ಷದ ಹಿಂದಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬಳ್ಳಾರಿಯ ಜಿಲ್ಲಾ ಪಂಚಾಯಿತಿಯಲ್ಲಿ ಒಂದು ವರ್ಷದ ಹಿಂದೆ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಲೆಕ್ಕ ಅಧೀಕ್ಷಕ (ಪ್ರಭಾರಿ ಲೆಕ್ಕಾಧಿಕಾರಿ) ಸಂಪತಕುಮಾರ್ ಹಾಗೂ ಮಹಿಳಾ ಸಿಬ್ಬಂದಿಯೊಬ್ಬರು ಕಚೇರಿಯಲ್ಲೇ ತುಂಬಾ ಸಲುಗೆಯಿಂದ ಇದ್ದುದ್ದನ್ನು ಹಾಗೂ ಇಬ್ಬರು ಚುಂಬಿಸುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್​ನಲ್ಲಿ ಸೆರೆಹಿಡಿದು ಅಸ್ತ್ರವಾಗಿ ಇಟ್ಟುಕೊಂಡಿದ್ದರು.

ವಿಡಿಯೋ ಇಟ್ಟುಕೊಂಡು ಅಧಿಕಾರಿಯನ್ನು ಹೆದರಿಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಕೊನೆಗೆ ಅಧಿಕಾರಿ ಕೆಲಸ ಮಾಡಿಕೊಡಲು ನಿರ್ಲಕ್ಷಿಸಿದ್ದಕ್ಕೆ ವಿಡಿಯೋ ವೈರಲ್​ ಮಾಡಿರುವ ಆರೋಪ ಕೇಳಿಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಅಧಿಕಾರಿ ವರ್ತನೆಗೆ ಅನೇಕ ನೆಟ್ಟಿಗರು ಖಂಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)