ಬಳ್ಳಾರಿ: ಸಿರುಗುಪ್ಪ ತಹಸೀಲ್ದಾರ್ ಪತ್ನಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ತಹಸೀಲ್ದಾರ್ ಗೃಹ ಕಚೇರಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ತಹಸೀಲ್ದಾರ್ ಸತೀಶ(ಸಾಯಿಬಣ್ಣ) ಬಿ.ಕೂಡ್ಲಿಗಿ ಅವರ ಪತ್ನಿ ಶಂಕ್ರಮ್ಮ ಮೃತ ದುರ್ದೈವಿ. ಇತ್ತೀಚೆಗೆ ಚುನಾವಣಾ ಕರ್ತವ್ಯ ಹಿನ್ನಲೆ ಬಳ್ಳಾರಿ ಡಿಸಿ ಕಚೇರಿಗೆ ಸತೀಶ್ ವರ್ಗವಣೆಯಾಗಿದ್ದರು. ಆದರೆ, ಸಿರುಗುಪ್ಪದಲ್ಲಿನ ಮನೆಯನ್ನು ಖಾಲಿ ಮಾಡಿರಲಿಲ್ಲ.
ಇಂದು ಅನುಮಾನಸ್ಪದವಾಗಿ ತಹಸೀಲ್ದಾರ್ ಪತ್ನಿ ಮೃತಪಟ್ಟಿದ್ದು, ಸ್ಥಳಕ್ಕೆ ಸಿರುಗುಪ್ಪ ಶಾಸಕ ಸೋಮಲಿಂಗಪ್ಪ ಸೇರಿ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)