ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಬಳ್ಕುಂಜೆ ಕಂಬಳವನ್ನು ಬಳ್ಕುಂಜೆ ಗ್ರಾಮಕ್ಕೆ ಉತ್ಸವವಾಗಿದೆ. ಮಹಿಳೆಯೊಬ್ಬರು ಅಧ್ಯಕ್ಷತೆಯಾಗಿ ಉತ್ತಮ ರೀತಿಯಲ್ಲಿ ಕಂಬಳವನ್ನು ಸಂಘಟಿಸುವುದು ಅಭಿನಂದನೀಯ ಎಂದು ಬಳ್ಕುಂಜೆ ಭಂಡಸಾಲೆ ಡಾ.ಬಾನುತೇಜ ಅಜಿಲ ಹೇಳಿದರು.
ಕೊಟ್ನಾಯಗುತ್ತು ಬಳ್ಕುಂಜೆ ಕಂಬಳ ಸಮಿತಿಯ ಎರಡನೇ ವರ್ಷದ ಕಂಬಳದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೆಳಗ್ಗೆ ಮನೆತನದ ದೈವಗಳಿಗೆ ಪ್ರಾರ್ಥನೆ ಸಲ್ಲಿಸಿ ಕಂಬಳ ಕರೆಗೆ ಪ್ರಸಾದ ಹಾಕಿ ಕಂಬಳಕ್ಕೆ ಚಾಲನೆ ನೀಡಲಾಯಿತು.
ಕವತ್ತಾರು ದೇವಸ್ಥಾನದ ಅರ್ಚಕ ವಿಷ್ಣುರಾಜ್ ಭಟ್ ದೇಂದಡ್ಕ, ಬಳ್ಕುಂಜೆ ಚರ್ಚ್ ಧರ್ಮಗುರು ಪೌಲ್ ಸಿಕ್ವೇರ, ಬಳ್ಕುಂಜೆ ಮಸೀದಿ ಧರ್ಮಗುರು ಮಹಮ್ಮದ್ ಶರೀಪ್, ಉಳೆಪಾಡಿ ದೇವಸ್ಥಾನದ ಅರ್ಚಕ ಮಧ್ವಪತಿ ಆಚಾರ್ಯ, ಮುಂಡ್ಕೂರು ದೇವಸ್ಥಾನ ಪ್ರಧಾನ ಅರ್ಚಕ ರಾಮದಾಸ್ ಭಟ್, ಕವತ್ತಾರು ದೇವಸ್ಥಾನ ಆಡಳಿತ ಮೊಕ್ತೇಸರ ನೀನಾ ನಿತ್ಯಾನಂದ ಅಜಿಲ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಡಾ.ಹರಿಕೃಷ್ಣ ಪುನರೂರು, ಜಾಗತಿಕ ಬಂಟರ ಸಂದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಯುಗಪುರುಷದ ಭುವನಾಭಿರಾಮ ಉಡುಪ, ಬಾಲಕೃಷ್ಣ ಹೆಗ್ಡೆ, ಮೂಲ್ಕಿ ಬಂಟರ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಗೋಪಿನಾಥ ಪಡಂಗ, ಪ್ರಭಾಕರ ಪೂಂಜ ಕೊಟ್ನಾಯಗುತ್ತು, ಮೂಲ್ಕಿ ಠಾಣಾಧಿಕಾರಿ ವಿದ್ಯಾಧರ್, ಭಗವಾನ್ ಆಳ್ವ ಮಡಲ್ಲ, ಗುಣಪಾಲ್ ಆಳ್ವ, ಚಿತ್ತಂಜನ್ ಆಳ್ವ, ಎರ್ಮಾಳ್ ರೋಹಿತ್ ಹೆಗ್ಡೆ, ಸುಧಾಕರ ಹೆಗ್ಡೆ, ಶಂಭು ಎನ್.ಶೆಟ್ಟಿ ಕೊಟ್ರಪಾಡಿಗುತ್ತು, ಶಶಿಕುಮಾರ್ ಶೆಟ್ಟಿ, ವಿಠ್ಠಲ ಶೆಟ್ಟಿ ಕೊಟ್ರಪಾಡಿ, ಪ್ರಭಾಕರ ಪೂಂಜ, ಬಾಲಕೃಷ್ಣ ಶೆಟ್ಟಿ ವರಪಾಡಿ, ಪ್ರಕಾಶ್ ಶೆಟ್ಟಿ, ಜಯದೀಪ್ ಶೆಟ್ಟಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನೆಲ್ಸನ್ ಲೋಬೋ, ರಂಜನ್ ಶೆಟ್ಟಿ, ಭಾಸ್ಕರ ಶೆಟ್ಟಿ ಏಳಿಂಜೆ, ಇನ್ನಬಗ್ಗರ ಗುತ್ತು ಗುತ್ತಿನಾರ್ ದೇವಿಪ್ರಸಾದ್ ಶೆಟ್ಟಿ, ಪುಲೋಡಿ ಉದಯ ಶೆಟ್ಟಿ, ಪ್ರಸಾದ್ ಶೆಟ್ಟಿ ಬಳ್ಕುಂಜೆ ಕಂಬಳ ಸಮಿತಿ ಅಧ್ಯಕ್ಷೆ ಮಲ್ಲಿಕಾ ಯಶವಂತ ಶೆಟ್ಟಿ ಮತ್ತಿತರರಿದ್ದರು.
ದಿನಕರ ಶೆಟ್ಟಿ ಸ್ವಾಗತಿಸಿದರು. ಶರತ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.