ಕೋಟ: ಬಾಳ್ಕುದ್ರು ಹಾಲು ಉತ್ಪಾದಕರ ಸಹಕಾರ ಸಂಘ ಮಹಾಸಭೆ ಚಿತ್ತಾರಿ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಸಂಘ ಅಧ್ಯಕ್ಷ ಶ್ರೀಪತಿ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಒಕ್ಕೂಟದ ವಿಸ್ತರಣಾಧಿಕಾರಿ ಸರಸ್ವತಿ ಲೆಕ್ಕಪತ್ರ ಮಂಡಿಸಿದರು. ಸಂಘದ ಲಾಭಾಂಶದಲ್ಲಿ ಶೇ.65 ಬೋನಸ್ ಹಾಗೂ ಶೇ.25 ಷೇರು ಡಿವಿಡೆಂಡನ್ನು ಹಾಲು ಉತ್ಪಾದಕರಿಗೆ ನೀಡಲಾಯಿತು. ಸಂಘಕ್ಕೆ ಅತಿ ಹೆಚ್ಚು ಹಾಲು ನೀಡಿದ ಪ್ರಥಮ ಹತ್ತು ಸದಸ್ಯರನ್ನು ಸನ್ಮಾನಿಸಲಾಯಿತು. ಸಂಘದ ವ್ಯಾಪ್ತಿಯ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ನಿರ್ದೇಶಕರಾದ ಬಾಬು ರಾಜೇಂದ್ರ ಐತಾಳ, ಸೈಮನ್ ಡಿ ಆಲ್ಮೇಡಾ, ವಲೇರಿಯನ್ ಡಿಸೋಜ, ರೇಖಾ ಭಂಡಾರ್ತಿ, ಅನಂತಯ್ಯ ನಾಯಕ್, ಸಾವಿತ್ರಿ ಕುಂದರ್, ಗೋಪಾಲ ಗಾಣಿಗ, ಸಹಾಯಕಿ ಜಯಂತಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ನಾಗರತ್ನ ವಾರ್ಷಿಕ ವರದಿ ವಾಚಿಸಿದರು. ಉಪಾಧ್ಯಕ್ಷೆ ನಾಗರತ್ನ ಗಾಣಿಗ ಸ್ವಾಗತಿಸಿದರು. ನಿರ್ದೇಶಕ ಜೈರಾಮ ಐತಾಳ ವಂದಿಸಿದರು.