ಜಿಲ್ಲೆ

ಬಲಿ ಪೂಜಾ ಮಂದಿರ ದಾನಿಯೊಡನೆ ಸಮಾಲೋಚನೆ

ಸೌಮ್ಯ ಆರ್

ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಅವರ ಅಳಿಯ ಉದ್ಯಮಿ ಜೈಪುನೀತ್ ಅವರು ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮ್ಮ ಸೇವಾ ರೂಪದಲ್ಲಿ ನೂತನ ಆಶ್ಲೇಷ ಬಲಿ ಪೂಜಾ ಮಂದಿರವನ್ನು ನಿರ್ಮಾಣ ಮಾಡಿಕೊಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ದಾನಿಗಳಾದ ಜೈ ಪುನೀತ್ ಅವರನ್ನು ಗುರುವಾರ ಬೆಂಗಳೂರಿನ ನಿವಾಸದಲ್ಲಿ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್.ಎಸ್ ಇಂಜಾಡಿ ಭೇಟಿ ಮಾಡಿ ಚರ್ಚಿಸಿದರು.

ಪೂಜಾ ಮಂದಿರ ನಿರ್ಮಾಣಕ್ಕೆ ಅನುಮತಿಯನ್ನು ಶ್ರೀ ಕೊಡಿಸುವಂತೆ ದಾನಿಗಳು ವಿನಂತಿಸಿದರು. ಶ್ರೀದಲ್ಲೇ ಸೂಕ್ತ ಕ್ರಮ ಕೈಗೊಂಡು ಪೂಜಾ ಮಂದಿರ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಸಹಕಾರ ನೀಡುವುದಾಗಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭರವಸೆ ನೀಡಿದರು. ಎರಡು ತಿಂಗಳ ಹಿಂದೆ ಮಾಸ್ಟರ್ ಪ್ಲಾನ್ ಸಮಿತಿ ಸಭೆಯಲ್ಲಿ ಮಾಡಿದ ನಿರ್ಣಯ ಮತ್ತು ವ್ಯವಸ್ಥಾಪನಾ ಸಮಿತಿ ಪ್ರಥಮ ಸಭೆಯಲ್ಲಿ ನಿರ್ಣಯ ಕೈಗೊಂಡ ಬಗ್ಗೆ ದಾನಿಗಳಿಗೆ ಅಧ್ಯಕ್ಷರು ವಿವರಿಸಿದರು.

ಗುರೂಜಿ ನಾಗಭೂಷಣ್, ವಕೀಲ ಎಂ.ವೆಂಕಪ್ಪ ಗೌಡ ಸುಳ್ಯ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಪವನ್ ಎಂ.ಡಿ., ಸ್ಥಳೀಯರಾದ ಭವಿಷ್ ಅಯ್ಯೆಟ್ಟಿ ಉಪಸ್ಥಿತರಿದ್ದರು.