ಬಳಂಜ ಬಿಲ್ಲವ ಸಂಘದ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ನಡೆಯಿತು. ಸೇವಂತಿ, ಎಚ್.ಧರ್ಣಪ್ಪ ಪೂಜಾರಿ ಮೊದಲಾದವರಿದ್ದರು. 
ಜಿಲ್ಲೆ

ತುಳುನಾಡಿನ ಸಂಸ್ಕೃತಿಗಿದೆ ಇತಿಹಾಸ: ಮುಖ್ಯಶಿಕ್ಷಕಿ ಸೇವಂತಿ ಪ್ರತಿಪಾದನೆ : ಬಳಂಜ ಬಿಲ್ಲವ ಸಂಘದಲ್ಲಿ ಆಟಿಡೊಂಜಿ ದಿನ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ತುಳುನಾಡಿನ ಸಂಸ್ಕೃತಿ, ಪದ್ಧತಿ, ಆಚಾರ, ವಿಚಾರ, ಆರಾಧನೆ, ನಂಬಿಕೆಗಳಿಗೆ ತನ್ನದೇ ಆದ ಇತಿಹಾಸವಿದೆ ಎಂದು ಮುಂಡಾಜೆ ಶಾಲಾ ಮುಖ್ಯಶಿಕ್ಷಕಿ ಸೇವಂತಿ ಹೇಳಿದರು.

ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಬಳಂಜ ವತಿಯಿಂದ, ಯುವ ಬಿಲ್ಲವ ವೇದಿಕೆ ಸಹಕಾರದೊಂದಿಗೆ, ಮಹಿಳಾ ಬಿಲ್ಲವ ವೇದಿಕೆ ನೇತೃತ್ವದಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕ್ರೀಡಾಕೂಟಕ್ಕೆ ಸಂಘದ ಗೌರವಾಧ್ಯಕ್ಷ ಎಚ್.ಧರ್ಣಪ್ಪ ಪೂಜಾರಿ ಚಾಲನೆ ನೀಡಿ ಶುಭ ಹಾರೈಸಿದರು. ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ.ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಬದನಾಜೆ ಶಾಲಾ ಮುಖ್ಯಶಿಕ್ಷಕ ನಿರಂಜನ್, ಮಹಿಳಾ ಬಿಲ್ಲವ ವೇದಿಕೆ ಸ್ಥಾಪಕಾಧ್ಯಕ್ಷೆ ಲಲಿತಾ, ಅಧ್ಯಕ್ಷೆ ಭಾರತಿ ಸಂತೋಷ್, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ, ಕೋಶಾಧಿಕಾರಿ ಪ್ರವೀಣ್ ಕುಮಾರ್ ಎಚ್.ಎಸ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್, ಗೌರವ ಮಾರ್ಗದರ್ಶಕ ಕೆ.ವಸಂತ ಸಾಲಿಯಾನ್, ಪ್ರಮುಖರಾದ ಯೋಗೀಶ್ ಪೂಜಾರಿ ಕಡ್ತಿಲ, ರಂಜಿತ್ ಪೂಜಾರಿ, ಯತೀಶ್ ಬಳಂಜ, ಯೋಗೀಶ್ ಆರ್, ದಿನೇಶ್ ಕೋಟ್ಯಾನ್, ಪ್ರವೀಣ್ ಲಾಂತ್ಯಾರು, ದಿನೇಶ್ ಪೂಜಾರಿ ಅಂತರ, ಜಗದೀಶ್ ಪೂಜಾರಿ, ರಕ್ಷಿತ್ ಬಗ್ಯೋಟ್ಟು, ಸಂತೋಷ್ ಸಾಲಿಯಾನ್, ರವೀಂದ್ರ ಬಿ.ಅಮೀನ್, ಪ್ರವೀಣ್ ಡಿ.ಕೋಟ್ಯಾನ್, ಸದಾನಂದ ಪೂಜಾರಿ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಅಧ್ಯಕ್ಷೆ ಭಾರತಿ ಸಂತೋಷ್ ಸ್ವಾಗತಿಸಿದರು. ಮಾಜಿ ಅಧ್ಯಕ್ಷೆ ವಿಶಾಲ ಜಗದೀಶ್ ನಿರೂಪಿಸಿದರು. ಮಾಲ ಎಂ.ಕೆ ತಿಂಡಿ-ತಿನಿಸು ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಅಶ್ವಿತಾ ಸಂತೋಷ್ ವಂದಿಸಿದರು.

ವಿವಿಧ ಮನೋರಂಜನಾ ಸ್ಪರ್ಧೆಗಳು ನಡೆದವು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

75 ಬಗೆಯ ಭಕ್ಷ್ಯಗಳು

ಬಿಲ್ಲವ ಸಮಾಜದವರು ಮನೆಯಲ್ಲೇ ತಯಾರಿಸಿ ತಂದಿದ್ದ 75 ಬಗೆಯ ತಿಂಡಿ-ತಿನಿಸುಗಳನ್ನು ಭೋಜನದೊಂದಿಗೆ ಹಂಚಿ ಆಟಿಯ ಸಂಭ್ರಮ ಆಚರಿಸಲಾಯಿತು. ತಿಂಡಿ-ತಿನಿಸುಗಳನ್ನು ಮನೆಯಲ್ಲಿ ತಯಾರಿಸಿ ತಂದ ಮಹಿಳಾ ಬಿಲ್ಲವ ವೇದಿಕೆ ಸದಸ್ಯರನ್ನು ಗೌರವಿಸಲಾಯಿತು