ಜಿಲ್ಲೆ

ಬೇಕರಿ ಖಾದ್ಯ ತಿನಿಸುಗಳ ಮಾರಾಟಗಾರರ ಸಂಘ ಸಭೆ

ಇಂದಿರಾ ಎನ್ ಕೆ

ಕೊಕ್ಕರ್ಣೆ: ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಿಸುಗಳ ತಯಾರಕರು ಹಾಗೂ ಮಾರಾಟಗಾರರ ಸಂಘದ ಮಾಸಿಕ ಸಭೆ ಸಂಘದ ಅಧ್ಯಕ್ಷ ವಿಶ್ವನಾಥ್ ಕುಲಾಲ್ ಅಧ್ಯಕ್ಷತೆಯಲ್ಲಿ ಬ್ರಹ್ಮಾವರದಲ್ಲಿ ನಡೆಯಿತು.

ಸಂತೆಕಟ್ಟೆ ನಮ್ರತಾ ಹೋಂ ಪ್ರೋಡಕ್ಟ್‌ನ ಉದಯ್ ಕುಮಾರ್ ನಾಯಕ್, ಹೆಬ್ರಿ ಶ್ರೀಕೃಷ್ಣ ಚಕ್ಕುಲಿ ಫ್ಯಾಕ್ಟರಿಯ ಕೃಷ್ಣ ನಾಯ್ಕ, ಉಡುಪಿ ಪದ್ಮ ಸ್ವೀಟ್ಸ್‌ನ ಗಣಪತಿ ಮರಕಾಲ ಅವರನ್ನು ಸನ್ಮಾನಿಸಲಾಯಿತು. ಸಂಘಕ್ಕೆ 17 ಮಂದಿ ಆಜೀವ ಸದಸ್ಯರನ್ನು ಸೇರ್ಪಡೆಗೊಳಿಸಲಾಯಿತು.

ಕಿಯೋನಿಕ್ಸ್ ಫ್ರಾಂಚೈಸಿ ಕುಂದಾಪುರ ಸೃಷ್ಟಿ ಇನ್ಫೋಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಹರ್ಷವರ್ಧನ್ ಶೆಟ್ಟಿ, ಆಹಾರ ಸುರಕ್ಷತಾ ಅಧಿಕಾರಿಗಳಾದ ಪ್ರವೀಣ್ ಕುಮಾರ್, ವಿವೇಕ್ ಆರ್.ತ್ರಿಮೆಲ್ಲೆ, ಪ್ರಧಾನ ಕಾರ್ಯದರ್ಶಿ ಸತ್ಯಪ್ರಸಾದ್ ಶೆಣೈ ಉಪಸ್ಥಿತರಿದ್ದರು.

ಕೋಶಾಧಿಕಾರಿ ಶಶಿಕಾಂತ್ ಜಿ.ನಾಯಕ್ ತಿಂಗಳ ಆಯವ್ಯಯ ಮಂಡಿಸಿದರು. ವಿಶ್ವನಾಥ್ ಬಿ.ಎಸ್.ಕೋಟೇಶ್ವರ, ನಿರ್ದೇಶಕ ಕೆ.ಮಂಜುನಾಥ್ ಕಾಮತ್ ನಿರೂಪಿಸಿದರು, ಗೌರವ ಸಲಹೆಗಾರ ಸ್ಟಾೃನ್ಲಿ ಹೆರಾಲ್ಡ್ ಡಿ.ಸೋಜಾ ವಂದಿಸಿದರು.