ಜಿಲ್ಲೆ

ರೈಲಿನಲ್ಲಿ ಬ್ಯಾಗ್ ಕಳವು

ಸೌಮ್ಯ ಆರ್

ಕಾಸರಗೋಡು: ಚೆನ್ನೈ-ಮಂಗಳೂರು ಮಧ್ಯೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಚೆನ್ನೈ ನಿವಾಸಿ ಜೆರಿನ್ ಥಾಮಸ್ ಎಂಬುವರ ಬೆಲೆಬಾಳುವ ಇಲೆಕ್ಟ್ರಾನಿಕ್ ಸಾಮಗ್ರಿ ಹೊಂದಿದ್ದ ಬ್ಯಾಗ್ ಕಳವಾಗಿರುವ ಬಗ್ಗೆ ಕಾಸರಗೋಡು ರೈಲ್ವೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾಞಂಗಾಡಿನಲ್ಲಿ ಬ್ಯಾಗ್ ಕಳವಾಗಿದೆ. ಕಾಞಂಗಾಡು ರೈಲ್ವೆ ನಿಲ್ದಾಣದಲ್ಲಿ ಇಳಿದ ವ್ಯಕ್ತಿ ಬ್ಯಾಗ್ ಕಳವು ನಡೆಸಿರಬೇಕೆಂದು ಸಂಶಯಿಸಲಾಗಿದೆ.