ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಪಂಗೆ ಅಧ್ಯಕ್ಷ ಮೆಟ್ರಿ ಸಿದ್ದೇಶ, ಉಪಾಧ್ಯಕ್ಷೆಯಾಗಿ ಕರಿಬಸಮ್ಮ ರಾಗಿ ಮಂಗಳವಾರ ಆಯ್ಕೆಯಾದರು 
ಜಿಲ್ಲೆ

ಬಾದನಹಟ್ಟಿ ಗ್ರಾಪಂಗೆ ಮೆಟ್ರಿ ಸಿದ್ದೇಶ ಅಧ್ಯಕ್ಷರಾಗಿ ಆಯ್ಕೆ

Gangavati - Desk - Veeresh S Ullagaddi

ಕುರುಗೋಡು: ತಾಲೂಕಿನ ಬಾದನಹಟ್ಟಿ ಗ್ರಾಪಂಗೆ ಅಧ್ಯಕ್ಷ ಮೆಟ್ರಿ ಸಿದ್ದೇಶ, ಉಪಾಧ್ಯಕ್ಷೆಯಾಗಿ ಕರಿಬಸಮ್ಮ ರಾಗಿ ಮಂಗಳವಾರ ಆಯ್ಕೆಯಾದರು.


ಬಾದನಹಟ್ಟಿ ಗ್ರಾಪಂ ಒಟ್ಟು 22 ಜನ ಸದಸ್ಯರನ್ನು ಹೊಂದಿದ್ದು, ಅಧ್ಯಕ್ಷ ಪ.ಪಂ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಗಾಳಿ ಬಸವರಾಜ, ಮೆಟ್ರಿ ಸಿದ್ದೇಶ ನಾಮಪತ್ರ ಸಲ್ಲಿಸಿದ್ದು, ಗಾಳಿ ಬಸವರಾಜ 8, ಮೆಟ್ರಿ ಸಿದ್ದೇಶ 13 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. ಒಂದು ಮತ ತಿರಸ್ಕೃತಿಗೊಂಡಿತು. ಉಪಾಧ್ಯಕ್ಷ ಸ್ಥಾನಕ್ಕೆ ಕರಿಬಸಮ್ಮ, ನೀಲಮ್ಮ ನಾಮಪತ್ರ ಸಲ್ಲಿಸಿದ್ದು, ನೀಲಮ್ಮ 8, ಕರಿಬಸಮ್ಮ 13 ಮತ ಪಡೆದು ಜಯಗಳಿಸಿದರು. ಒಂದು ಮತ ತಿರಸ್ಕೃತಿಗೊಂಡಿತು ಎಂದು ಚುನಾವಣಾಧಿಕಾರಿ ವಿಜಯಲಕ್ಷ್ಮೀ ತಿಳಿಸಿದರು.


ಪಿಡಿಒ ರಾಮಲಿ,ತಾಪಂ ಮಾಜಿ ಸದಸ್ಯ ಗೋವಿಂದಪ್ಪ, ಪ್ರಮುಖರಾದ ಬಸಾ ಹನುಮಂತ ರೆಡ್ಡಿ, ಪುರುಗೈ ಬಸಪ್ಪ, ಚಾನಾಳು ರಾಮಣ್ಣ, ಬಿ.ಕೆ.ಪರಶುರಾಮ, ಪುರುಷೋತ್ತಮ, ಪುರುಗೈ ತಿಮ್ಮಪ್ಪ, ಗಾಳಿ ಮಲ್ಲಯ್ಯ, ಗೊರವರ ಗಾದಿಲಿಂಗ, ಕೆ.ಮಂಜುನಾಥ, ಪವಾಡಿ ಕರೆಪ್ಪ, ಅಮೃತಾಪುರ ಮಲ್ಲಯ್ಯ, ಮೇಟಿ ಬಸಣ್ಣ, ಪವಾಡಿ ಗಾದಿಲಿಂಗ, ಅಂದ್ರದ ಕರಿಬಸಪ್ಪ, ಚಿದಾನಂದಪ್ಪ, ದುರ್ಗಾ ಗಾಳೆಪ್ಪ, ಗೊರವರ ಗೋವಿಂದಪ್ಪ, ಮೆಟ್ರಿ ಕರಿಬಸಪ್ಪ, ಬುಳ್ಳ ತಿಪ್ಪಯ್ಯ ಇದ್ದರು.