ಜಿಲ್ಲೆ

'ವಿಜಯೇಂದ್ರ ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ'

ಬೆಂಗಳೂರು: ಬಿಜೆಪಿ ಪಾರ್ಟಿಗೆ ಬಿ.ವೈ. ವಿಜಯೇಂದ್ರ ಬಾಹುಬಲಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಶ್ಲಾಘಿಸಿದರು.

ಆರ್​ಆರ್​ ನಗರ ಹಾಗೂ ಶಿರಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿ ಗೆಲುವಿನತ್ತ ದಾಪುಗಾಲು ಇಡುತ್ತಿರುವ ಹಿನ್ನೆಲೆಯಲ್ಲಿ ಶ್ರೀರಾಮುಲು ಮಾತನಾಡಿದರು.

ಮುಖ್ಯಮಂತ್ರಿಗಳು ಮತ್ತು ಅವರ ಆಡಳಿತದ ಮೇಲೆ ಜನ ನಂಬಿಕೆ ಇಟ್ಟಿದ್ದರು. ಆ‌ಕಾರಣದಿಂದ ಇವತ್ತು ನಾವು ಗೆಲ್ತಿದ್ದೇವೆ. ನಮ್ಮ ಯುವ ನಾಯಕ ವಿಜಯೇಂದ್ರ ಮುಂದಾಳತ್ವದಲ್ಲಿ ಗೆಲುವಾಗ್ತಿದೆ ಎಂದರು.

ನಾನು ಹಿಂದೆ ಒಂದು ಮಾತು ಹೇಳಿದ್ದೆ, ವಿಜಯೇಂದ್ರ ಎಲ್ಲೇ ಹೊದ್ರು ಗೆಲ್ತಾರೆ ಅಂತ ಹೇಳಿದ್ದೆ, ಅದ್ರಂತೆ ಗೆಲುವು ಆಗುತ್ತಿದೆ. ವಿಜಯೇಂದ್ರ ಅವರು ಬಿಜೆಪಿ ಪಾರ್ಟಿಗೆ ಬಾಹುಬಲಿ ಇದ್ದಂತೆ ಎಂದು ಸಚಿವ ಶ್ರೀರಾಮುಲು ಶ್ಲಾಘಿಸಿದರು. (ದಿಗ್ವಿಜಯ ನ್ಯೂಸ್​)