ಬದಿಯಡ್ಕ: ವಿದ್ಯಾಗಿರಿಯಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಧರ್ಮಶಾಸ್ತಾ ಭಜನಾ ಮಂದಿರದಲ್ಲಿ, ಶ್ರೀ ಅಯ್ಯಪ್ಪ ಸ್ವಾಮಿಯ ಬೆಳ್ಳಿ ಛಾಯಾಚಿತ್ರ ಪ್ರತಿಷ್ಠಾಪನೆ ಬುಧವಾರ, ಗಣೇಶ್ ಭಟ್ ಮುಂಡೋಡು ನೇತೃತ್ವದಲ್ಲಿ, ಗುರುಸ್ವಾಮಿ ರಮೇಶ್ ಆಳ್ವ ಮತ್ತು ಶಿಷ್ಯವೃಂದದವರಿಂದ ನಡೆಯಿತು.
ವಿವಿಧ ಭಜನಾ ಸಂಘಗಳಿಂದ ನಿರಂತರ ಭಜನಾ ಕಾರ್ಯಕ್ರಮ ಜರುಗಿತು. ಬೆಳಗ್ಗೆ 24 ತೆಂಗಿನಕಾಯಿ ಮಹಾಗಣಪತಿ ಹೋಮ ನಡೆಯಿತು. ಮಧ್ಯಾಹ್ನ ಶರಣಂ ವಿಳಿ, ಮಹಾಮಂಗಳಾರತಿ, ಅನ್ನಪ್ರಸಾದ, ಸತ್ಸಂಗ, ಮಧ್ಯಾಹ್ನ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆಗಮನ, ಪೂರ್ಣಕುಂಭ ಸ್ವಾಗತ, ಧಾರ್ಮಿಕ ಸಭೆ ಜರುಗಿತು. ರಾತ್ರಿ ಶ್ರೀ ಅಯ್ಯಪ್ಪ ದೀಪೋತ್ಸವದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.