ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ, ಕಾಲೇಜಿನ ಆಂತರಿಕ ಗುಣಮಟ್ಟ ಭರವಸಾ ಕೋಶ, ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಸಹಯೋಗದಲ್ಲಿ ಆಯುರ್ವೇದ ಔಷಧಗಳ ಮಾಹಿತಿ ಹಾಗೂ ಪ್ರದರ್ಶನ ನಡೆಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷ ಡಾ.ರವಿ ಕಕ್ಕೆಪದವು ಉದ್ಘಾಟಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ದಿನೇಶ ಪಿ. ಟಿ ಅಧ್ಯಕ್ಷತೆ ವಹಿಸಿದ್ದರು.
ನೇರಳಗದ್ದೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶ್ವೇತಾಲಕ್ಷ್ಮೀ ಸಂಪನ್ಮೂಲ ವ್ಯಕ್ತಿಯಾಗಿದ್ದರು. ನಾಟಿವೈದ್ಯೆ ಕೊಠಾರಿ ಕೆಂಚಮ್ಮ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷೆ ಸಾಯಿ ಗೀತಾ ಕೂಜುಗೋಡು, ಕಾರ್ಯಕ್ರಮ ಸಂಯೋಜಕಿ ಪ್ರಮೀಳಾ ಎನ್, ಉಪನ್ಯಾಸಕರಾದ ಮಧುರಾ ಕೆ, ಕೃತಿಕಾ ಪಿ.ಎಸ್, ವಿದ್ಯಾರ್ಥಿ ಸಂಯೋಜಕರಾದ ರಿತಿಕ್ ಸಿ.ವಿ. ಮತ್ತು ಕಾರ್ತಿಕ್ ಯು. ಉಪಸ್ಥಿತರಿದ್ದರು.
ವಿವಿಧ ಔಷಧೀಯ ಸಸ್ಯಗಳ ಪ್ರದರ್ಶನ ನಡೆಯಿತು. ಸ್ಥಳೀಯ ಕುಮಾರಸ್ವಾಮಿ ಶಾಲೆ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಶ್ರೀ ಸುಬ್ರಹ್ಮಣ್ಯೇಶ್ವರ ಪ್ರೌಢಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಆಯುರ್ವೇದ ಗಿಡಮೂಲಿಕೆ ವೀಕ್ಷಿಸಿದರು. ಚೈತ್ರಾ ಸಿ. ಮತ್ತು ತ್ರಿಶಾ ಕೆ. ಪರಿಚಯಿಸಿದರು. ಜೀವಿತ್ ಕಾರ್ಯಕ್ರಮ ನಿರೂಪಿಸಿದರು. ಯೋಗಿತಾ ವಂದಿಸಿದರು.