ಜಿಲ್ಲೆ

ಕಾಲಗಣನೆಯ ಅರಿವಿಲ್ಲದೆ ಬದುಕು ಅಸಾಧ್ಯ: ಸಂಸ್ಕೃತ ವಿವಿ ಕುಲಪತಿ ಎಸ್​.ಅಹಲ್ಯ ಅಭಿಮತ

Bengaluru - General - Rama Kishan K V

ಬೆಂಗಳೂರು: ಪ್ರಾಣದ ಉತ್ಪತ್ತಿ ಹಾಗೂ ಪ್ರಾಣದ ನಿರ್ಗಮನ ಕಾಲವೇ ಜೀವನ. ಜ್ಯೋತಿಷಶಾಸ್ತ್ರ ಹಾಗೂ ಆಯುರ್ವೇದ ಈ ಕಾಲದ ಜೀವನಕ್ಕೆ ಅಗತ್ಯವಾಗಿದೆ. ಕಾಲಗಣನೆಯ ಅರಿವಿಲ್ಲದೆ ಬದುಕು ಸಾಗಿಸಲು ಸಾಧ್ಯವಿಲ್ಲ. ಕಾಲದ ಬಗ್ಗೆ ಆಯುರ್ವೇದದಲ್ಲಿ 30ಕ್ಕೂ ಅಧಿಕ ಉಲ್ಲೇಖಗಳು ಸಿಗುತ್ತವೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಎಸ್​. ಅಹಲ್ಯ ಹೇಳಿದ್ದಾರೆ.

ಕರ್ನಾಟಕ ಸಂಸತ ವಿಶ್ವವಿದ್ಯಾಲಯ, ರಾಜ್ಯ ಜ್ಯೋತಿಷರ ಹಾಗೂ ಜ್ಯೋತಿಷ ಬೋಧನಾ ಸಂಸ್ಥೆಗಳ ಒಕ್ಕೂಟ ವತಿಯಿಂದ ಶುಕ್ರವಾರ ವಿವಿ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ಜ್ಯೋತಿಷಿಗಳಿಂದ 'ವೈದ್ಯಕಿಯ ಜ್ಯೋತಿಷ' ಕಾರ್ಯಾಗಾರದಲ್ಲಿ ಮಾತನಾಡಿದರು.

ವೈದ್ಯಕಿಯ ಜ್ಯೋತಿಷ ವಿಚಾರದಲ್ಲಿ ಸದ್ಯದಲ್ಲೇ ವಿವಿ ವತಿಯಿಂದ ಸಲಹಾ ಶಿಬಿರಗಳನ್ನು ಏರ್ಪಡಿಸಲಾಗುತ್ತದೆ. ಈ ಮೂಲಕ ಜನರಿಗೆ ಅರಿವು ಮೂಡಿಸಲಾಗುವುದು ಎಂದರು.

ಡಾ.ಸ್ವಪ್ನ, ಅನ್ನಪೂರ್ಣ ಭಟ್​, ಟಿ.ಎಸ್​. ಗಾಯತ್ರಿ, ಅಕ್ಷತಾ ರಾವ್​, ಶಾರದಾಮಣಿ, ವನಮಾಲಾ ಯೋಗೀಶ್​, ಜಿ.ಆರ್​. ಗಾಯತ್ರಿ, ಭಾಗ್ಯ, ನಾಗರತ್ನ ಮತ್ತಿತರರು ವಿಚಾರ ಮಂಡಿಸಿದರು. ಕಾರ್ಯಾಗಾರದಲ್ಲಿ 200ಕ್ಕೂ ಅಧಿಕ ಜ್ಯೋತಿಷಿಗಳು ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಅನಂತ ರಾವನ್​, ಮಾಡರ್ನ್​ ಆಸ್ಟ್ರಾಲಜಿ ಸಂಪಾದಕಿ ಗಾಯತ್ರಿದೇವಿ ವಾಸುದೇವ್​, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಹಿರಿಯ ವಿಜ್ಞಾನಿ ಶಿವಾನಿ ಕೋಣಂದೂರ್​, ಮೈಸೂರಿನ ಶ್ರೀಮಾಯಕಾರ ಗುರುಕುಲದ ಪ್ರಾಂಶುಪಾಲೆ ರೂಪಶ್ರೀ ಇತರರಿದ್ದರು.