ಯಲಬುರ್ಗಾ ತಾಲೂಕಿನ ನರಸಾಪುರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಸಿಬ್ಬಂದಿ ವ್ಯಕ್ತಿಯ ಆರೋಗ್ಯ ತಪಾಸಣೆ ನಡೆಸಿದರು 
ಜಿಲ್ಲೆ

ಆಯುರ್ವೇದ ಔಷಧ ಬಳಕೆ ಆರೊಗ್ಯಕ್ಕೆ ಸೂಕ್ತ: ಪಂಚಕರ್ಮ ವಿಭಾಗದ ಡಾ.ಟಿ.ನೇತ್ರಾ ಅಭಿಪ್ರಾಯ

Gangavati - Desk - Veeresh S Ullagaddi

ಯಲಬುರ್ಗಾ: ಆಯುರ್ವೇದ ಔಷಧ ಬಳಕೆ ಮಾಡುವ ಮೂಲಕ ಸದೃಢ ಆರೋಗ್ಯ ರೂಪಿಸಿಕೊಳ್ಳಬೇಕು ಎಂದು ಪಂಚಕರ್ಮ ವಿಭಾಗದ ಡಾ.ಟಿ.ನೇತ್ರಾ ಹೇಳಿದರು.


ತಾಲೂಕಿನ ನರಸಾಪುರ ಗ್ರಾಮದ ಸಮುದಾಯ ಭವನದಲ್ಲಿ ಮುರಡಿಯ ನರಗುಂದ ಮೆಮೊರಿಯಲ್ ಆಯುರ್ವೇದ ವೈದ್ಯಕೀಯ ಆಸ್ಪತ್ರೆ ಬುಧವಾರ ಹಮ್ಮಿಕೊಂಡಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.


ಬಹುದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುವವರು ಆಯುರ್ವೇದ ಔಷಧ ಉಪಯೋಗಿಸಬೇಕು. ಅತ್ಯುತ್ತಮ ಚಿಕಿತ್ಸಾ ವಿಧಾನಗಳಾದ ಮನೆ ಮದ್ದುಗಳು ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಅಲೋಪತಿಕ್ ಔಷಧ ಪದ್ಧತಿಯತ್ತ ಒಲವು ತೋರುತ್ತಿದ್ದಾರೆ. ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ಚಿಕಿತ್ಸೆ ಒಳ್ಳೆಯದು ಎಂದರು. ಆಯುರ್ವೇದ ತಜ್ಞೆ ಡಾ.ನಗ್ಮಾ ಬಿಸರಳ್ಳಿ ಮಾತನಾಡಿದರು. ಆರೋಗ್ಯ ಸಿಬ್ಬಂದಿ ಪಲ್ಲವಿ ತುಪ್ಪದ, ಹವಳಮ್ಮ ಮುರಡಿ, ವಿನಯಕುಮಾರ, ಮುಖಂಡ ಶರಣಪ್ಪಗೌಡ ಮಾಲಿಪಾಟೀಲ್ ಇತರರಿದ್ದರು.