ಜಿಲ್ಲೆ

ಕೆದಿಂಜೆ ಅಬ್ಬಗ ಮೂಲಸ್ಥಾನದಲ್ಲಿ ಆಯನೋತ್ಸವ

ಕಾರ್ಕಳ: ಕೆದಿಂಜೆ ಉರ್ಕಿದೊಟ್ಟು ಶ್ರೀಕ್ಷೇತ್ರ ಅಬ್ಬಗ ದಾರಗ ಮೂಲಸ್ಥಾನದಲ್ಲಿ ಭಾನುವಾರ ಅಯನೋತ್ಸವ ನಡೆಯಿತು. ಪ್ರಧಾನ ಅರ್ಚಕ ಗುರುಪ್ರಸಾದ್ ಭಟ್ ನೇತೃತ್ವದಲ್ಲಿ ಕ್ಷೇತ್ರದಲ್ಲಿ ಪಂಚಾಮೃತ ಅಭಿಷೇಕ, ಮಹಾಪೂಜೆ, ಪಲ್ಲಪೂಜೆ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಸಂಸದ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕರಾದ ವಿ.ಸುನೀಲ್ ಕುಮಾರ್, ಗುರ್ಮೆ ಸುರೇಶ್ ಶೆಟ್ಟಿ ಭೇಟಿ ನೀಡಿ ದೇವರ ದರ್ಶನ ಪಡೆದರು. ಕ್ಷೇತ್ರದ ಮೋಕ್ತೆಸರರಾದ ದೊಡ್ಡಣ್ಣ ಎಂ.ಶೆಟ್ಟಿ, ಕೆ.ಪ್ರಭಾಕರ ಶೆಟ್ಟಿ, ಮುಖೇಶ್ ಕೆ.ಶೆಟ್ಟಿ, ಸೂರ್ಯಕಾಂತ್ ಶೆಟ್ಟಿ, ಸತೀಶ್ ಶೆಟ್ಟಿ, ಮಂಜುನಾಥ ಎಸ್.ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.