ಜಿಲ್ಲೆ

ಸುಸ್ಥಿರ ಅಭಿವೃದ್ಧಿಗೆ ಪ್ರಾಕೃತಿಕ ಸಂಪನ್ಮೂಲ ಸಂರಕ್ಷಣೆ : ರಮೇಶ ಶೇಣವ ಪ್ರತಿಪಾದನೆ

ಸೌಮ್ಯ ಆರ್

ಉಳ್ಳಾಲ: ದೇಶದ ಸುಸ್ಥಿರ ಅಭಿವೃದ್ಧಿಗೆ ಪ್ರಾಕೃತಿಕ ಸಂಪನ್ಮೂಲಗಳನ್ನು ಜೋಪಾನವಾಗಿ ಬಳಸಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ಅಗತ್ಯ ಎಂದು ಜನಜೀವನ ಬಾಳೆಪುಣಿ ಅಧ್ಯಕ್ಷ ರಮೇಶ ಶೇಣವ ಹೇಳಿದರು.

ಜನಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ಬಾಳೆಪುಣಿಯಲ್ಲಿ ನಡೆದ ಜಾಗೃತಿ ಜಾಥಾ, ಕ್ಷೇತ್ರ ಭೇಟಿ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಜ್ಞಾ ಮುಟ್ಟಿನ ಕಪ್ ಮತ್ತು ಪರಿಸರ ಸ್ನೇಹಿ ಪ್ಯಾಡ್ ಬಳಕೆ ಬಗ್ಗೆ ಮಾಹಿತಿ ನೀಡಿದರು. ಉದ್ಯಮಿ ರಾಧಾಕೃಷ್ಣ ರೈ ಉಮಿಯ, ಪ್ರೊ.ಸಿ.ವಿ.ಪೂಜಾರ್, ಡಾ.ಕೃಷ್ಣ ಪ್ರಸಾದ್, ಕಣಂತೂರಿನ ಪುಷ್ಪಾ ಕೇಶವ, ಶರ್ಮಿಳಾ ರವೀಂದ್ರ, ಶೇಖರ ಮಡಿವಾಳ ಹೂಹಾಕುವಕಲ್ಲುವಿನ ಜಯ, ಕಾವೇರಿ, ಚಂದ್ರಹಾಸ ಕಣಂತೂರು, ಬಾಳೆಪುಣಿ ಪಂಚಾಯಿತಿ ಅಧ್ಯಕ್ಷೆ ಗೀತಾ ಭಂಡಾರಿ, ಪಿಡಿಒ ವೆಂಕಟೇಶ್, ಕಾರ್ಯದರ್ಶಿ ಆಯಿಷಾಬಾನು, ಪ್ರಾಧ್ಯಾಪಕರಾದ ಪ್ರಶಾಂತ್ ಪೈ, ಲೈಲಾ ಜಸೀಲ, ಶೈನಿ ಮ್ಯಾತ್ಯು, ಡಾ.ರೊನಲ್ಡ್ ಮೊದಲಾದವರು ಉಪಸ್ಥಿತರಿದ್ದರು. ಮಾಜಿ ಒಂಬುಡ್ಸ್‌ಮೆನ್ ಶೀನ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.