ಜಿಲ್ಲೆ

ಮಾರಕ ಕಾಯಿಲೆಗಳ ಅರಿವು ಅವಶ್ಯ

ಇಂದಿರಾ ಎನ್ ಕೆ

ಗಂಗೊಳ್ಳಿ: ರೇಬಿಸ್ ರೋಗ ಪ್ರಾಣಕ್ಕೆ ಮಾರಕವಾಗಿರುವ ಕಾಯಿಲೆಯಾಗಿರುವುದರಿಂದ ಆ ಬಗೆಗೆ ಪ್ರತಿಯೊಬ್ಬರಲ್ಲೂ ಕೂಡ ಸಂಪೂರ್ಣ ಅರಿವು ಇರಬೇಕಾದದ್ದು ಅವಶ್ಯಕ ಎಂದು ಗುಜ್ಜಾಡಿ ಪಶು ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿ ಡಾ.ಅರುಣ್ ಕೆ.ಪಿ. ಅಭಿಪ್ರಾಯಪಟ್ಟರು.

ಜಿಪಂ ಉಡುಪಿ, ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಡುಪಿ, ಎಸ್.ವಿ.ಕಾಮರ್ಸ್ ಕ್ಲಬ್ ಗಂಗೊಳ್ಳಿ ಮತ್ತು ಎಸ್.ವಿ.ಪಪೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಪಪೂ ಕಾಲೇಜಿನಲ್ಲಿ ಸೋಮವಾರ ಹುಚ್ಚುನಾಯಿ ರೇಬಿಸ್ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲೆ ಕವಿತಾ ಎಂ.ಸಿ.ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಪ್ರತಿನಿಧಿ ಮಾನ್ಯಾ ಖಾರ್ವಿ, ಎಸ್.ವಿ.ಕಾಮರ್ಸ್ ಕ್ಲಬ್ ಸಂಯೋಜಕ ನರೇಂದ್ರ ಎಸ್.ಗಂಗೊಳ್ಳಿ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಸುಗುಣ ಆರ್.ಕೆ.ಉಪಸ್ಥಿತರಿದ್ದರು.

ಸಂಜನಾ ಮತ್ತು ಲೇಖಾ ಪ್ರಾರ್ಥಿಸಿದರು. ಮೇಘಾ ಖಾರ್ವಿ ಸ್ವಾಗತಿಸಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷಯಾ ಖಾರ್ವಿ ಪ್ರಸ್ತಾವನೆಗೈದರು. ವಿದ್ಯಾರ್ಥಿನಿಯರಾದ ಅಮೂಲ್ಯಾ ಖಾರ್ವಿ ನಿರೂಪಿಸಿ, ಭೂಮಿಕಾ ಖಾರ್ವಿ ವಂದಿಸಿದರು.