ಕಿರಾಡಿ ಯಕ್ಷ ನಕ್ಷತ್ರ ಟ್ರಸ್ಟ್ ವತಿಯಿಂದ ಉಳ್ಳೂರು ಬ್ರಹ್ಮ ಬೈದರ್ಕಳ ಗರಡಿ ಎದುರು ನಡೆದ ಯಕ್ಷಗಾನ ಪ್ರದರ್ಶನದಲ್ಲಿ ಕಲಾ ರಾಘವ ಎಂಬ ಬಿರುದು ನೀಡಿ ಗೌರವಿಸಲಾಯಿತು.  
ಜಿಲ್ಲೆ

ಕಲಾ ರಾಘವ ಬಿರುದು ಪ್ರದಾನ

ಇಂದಿರಾ ಎನ್ ಕೆ

ಜನ್ನಾಡಿ: ಕಿರಾಡಿ ಯಕ್ಷ ನಕ್ಷತ್ರ ಟ್ರಸ್ಟ್ ವತಿಯಿಂದ ಉಳ್ಳೂರು ಬ್ರಹ್ಮ ಬೈದರ್ಕಳ ಗರಡಿ ಎದುರು ನಡೆದ ಯಕ್ಷಗಾನ ಪ್ರದರ್ಶನ ಸಂದರ್ಭ 74ನೇ ಉಳ್ಳೂರಿನ ಯಕ್ಷ ಕಲಾವಿದ ರಾಘವೇಂದ್ರ ಉಳ್ಳೂರು ಅವರಿಗೆ ‘ಕಲಾ ರಾಘವ’ ಬಿರುದು ನೀಡಿ ಗೌರವಿಸಲಾಯಿತು.

ಭಾಗವತ ಹೆಬ್ರಿ ಗಣೇಶ್ ಕುಮಾರ ಅವರ ಪುತ್ರ ಅಸೌಖ್ಯದಿಂದ ಬಳಲುತ್ತಿದ್ದು, ಅವರ ಚಿಕಿತ್ಸೆಗೆ ಯಕ್ಷ ನಕ್ಷತ್ರ ಟ್ರಸ್ಟ್ ಸಂಚಾಲಕ ಪ್ರಕಾಶ್ ಕಿರಾಡಿ ಸಹಾಯಧನ ನೀಡಿದರು. ಉಳ್ಳೂರು ಗ್ರಾಪಂ ಅಧ್ಯಕ್ಷೆ ಕುಸುಮಾ ಶೆಟ್ಟಿ, ಯಕ್ಷ ನಕ್ಷತ್ರ ಟ್ರಸ್ಟ್ ಸಂಚಾಲಕ ಪ್ರಕಾಶ್ ಕಿರಾಡಿ, ಬನಶಂಕರಿ ದೇಗುಲ ಮೊಕ್ತೇಸರ ಸಂಜೀವ ಶೆಟ್ಟಿ, ಚಿಟ್ಟೆ ರಾಜಗೋಪಾಲ ಹೆಗ್ಡೆ, ಗ್ರಾಪಂ ಸದಸ್ಯ ಸುಧಾಕರ ಶೆಟ್ಟಿ, ವೀರ ಕಲ್ಲೂಕುಟಿಕ ದೇವಸ್ಥಾನ ಪಾತ್ರಿ ಸುಧಾಕರ, ಜಗರಿಬೆಟ್ಟು ಸಂಜೀವ ಪೂಜಾರಿ, ಬೆಂಕಿ ಮಣಿ ಸಂತೋಷ್ ಉಪಸ್ಥಿತರಿದ್ದರು. ದಿನೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಭರತ್ ಪೂಜಾರಿ ವಂದಿಸಿದರು.