ಜಿಲ್ಲೆ

ಸುಧಾ ವೆಂಚರ್ಸ್‌ಗೆ ಇಂಡೋನೇಷ್ಯಾ ಜಿ-20 ಶೃಂಗಸಭೆ ವೇಳೆ ಅಚೀವ್‌ಮೆಂಟ್ ಅವಾರ್ಡ್ ಪ್ರದಾನ

ಬೆಂಗಳೂರು: ಇಂಡೋನೇಷ್ಯಾದ ಬಾಲಿಯಲ್ಲಿ ಇತ್ತೀಚೆಗೆ ನಡೆದ ಜಿ-20 ಶೃಂಗಸಭೆಯ ಸಂದರ್ಭದಲ್ಲಿ ನಗರದ ಸುಧಾ ವೆಂಚರ್ಸ್‌ ಸಂಸ್ಥೆಗೆ ಬಿಸಿನೆಸ್ ಮೀಟ್ಸ್ ಇವೆಂಟ್ಸ್ ಮತ್ತು ಸಾಮಾಜಿಕ ಸೇವೆಗಳ ವಿಭಾಗದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಜಿ-20 ಶೃಂಗಸಭೆಯ ಅಂಗವಾಗಿ ನಡೆದ ಜಿಇಎಫ್ ಶೃಂಗದ ವೇಳೆ ಬಿ ಟು ಬಿ (ಬಿಸಿನೆಸ್ ಟು ಬಿಸಿನೆಸ್) ವಿಭಾಗದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಈ ಪುರಸ್ಕಾರವನ್ನು ಸ್ವೀಕರಿಸಿರುವ ಸುಧಾ ವೆಂಚರ್ಸ್‌ ಸಂಸ್ಥೆಯ ಮುಖ್ಯಸ್ಥೆ ಸುಧಾ ಅವರು ಸ್ವೀಕರಿಸಿದರು.

ಇಂಡೋನೇಷ್ಯಾದ ಮಹಾರಾಜರು ಅಲ್ಲಿನ ಅರಮನೆಗೆ ಆಮಂತ್ರಿಸಿ, ಗೌರವ ಸೂಚಿಸಿದ್ದಲ್ಲದೇ ಔತಣಕೂಟವನ್ನೂ ಏರ್ಪಡಿಸಿದ್ದರು. ‘‘ಸ್ವದೇಶದಲ್ಲಿ ಮಾತ್ರವಲ್ಲದೇ ದೇಶವಿದೇಶಗಳಿಗೆ ಭಾರತೀಯರನ್ನು ಕರೆತಂದು, ಒಳ್ಳೆಯ ಸಂಪರ್ಕ ಸಾಧಿಸುವಲ್ಲಿ ಯಶಸ್ವಿಯಾಗಿದ್ದೀರಿ’’ ಎಂದು ಸುಧಾ ಅವರ ಬಗ್ಗೆ ಮಹಾರಾಜರು ಮತ್ತು ಸ್ಥಳೀಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು. ಪ್ರಶಸ್ತಿಯ ಜತೆಗೆ ಚಿನ್ನದ ನಾಣ್ಯವನ್ನೂ ನೀಡಲಾಯಿತು.