ಹುಬ್ಬಳ್ಳಿ: ಹೊಸತನದ ಹರಿಕಾರ, ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿ ಹಾಗೂ ದಿಗ್ವಿಜಯ 24/7 ಸುದ್ದಿ ವಾಹಿನಿ ವತಿಯಿಂದ ಮಹಿಳಾ ದಿನಾಚರಣೆ ನಿಮಿತ್ತ ಮಾ. 7ರಂದು ಮಹಿಳೆಯರಿಗಾಗಿ ವಿವಿಧ ಸೃಜನಾತ್ಮಕ ಸ್ಪರ್ಧೆಗಳನ್ನು ಹುಬ್ಬಳ್ಳಿ ನಗರದಲ್ಲಿ ಆಯೋಜಿಸಲಾಗಿದೆ.
ಈ ಸ್ಪರ್ಧೆಗಳು ಹುಬ್ಬಳ್ಳಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಭಾನುವಾರ ಜರುಗಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಮಹಿಳೆಯರು ಮುಂಚಿತವಾಗಿಯೇ ಮೊಬೈಲ್ ಫೋನ್ ಸಂಖ್ಯೆ 88844 32170 ಅಥವಾ 88844 32253 ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿ ಸ್ಪರ್ಧೆಗೂ ಮೂರು ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಗಳ ವಿವರ ಈ ರೀತಿ ಇವೆ.
ಡ್ರೀಮ್ ಹೌಸ್ (ಕನಸಿನ ಮನೆ) ಸ್ಪರ್ಧೆ: ಅಚ್ಚುಕಟ್ಟಾದ, ಸೊಗಸಾದ ಮನೆ ನಿರ್ಮಾಣ ಮಹಿಳೆಯರಿಗೆ ಅತಿ ದೊಡ್ಡ ಕನಸು. ಮನೆಯ ಒಪ್ಪ ಓರಣ, ಅಂದ ಚಂದದ ನಿರ್ವಹಣೆಯಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿರುತ್ತಾರೆ. ಈ ಹಿನ್ನೆಲೆಯಲ್ಲಿ ಕನಸಿನ ಮನೆಯ ಮಾದರಿ ನಿರ್ಮಿಸುವ ಸ್ಪರ್ಧೆಯನ್ನು ಮಹಿಳೆಯರಿಗೆ ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 2*2 ಚದರ ಅಡಿ ಮನೆ ನಿರ್ಮಿಸಬೇಕು. ಕಾರ್ಡ್‌ಬೋರ್ಡ್, ಫೋಮ್, ಥರ್ಮಾಕೋಲ್, ಕಾಟನ್ ಬಾಕ್ಸ್, ಪ್ಲಾಸ್ಟಿಕ್ ಸಹಾಯದಿಂದ ಸ್ಥಳದಲ್ಲಿಯೇ ತಯಾರಿಸಬೇಕು. ಈ ವಸ್ತುಗಳನ್ನು ಸ್ಪರ್ಧಾಳುಗಳೇ ತರಬೇಕು. ಸ್ಪರ್ಧೆಯಲ್ಲಿ ಗರಿಷ್ಠ 50 ಜನರಿಗೆ ಪ್ರವೇಶ ಅವಕಾಶವಿದೆ. ಮಾ. 7ರಂದು ಬೆಳಗ್ಗೆ 10 ಗಂಟೆಗೆ ಈ ಸ್ಪರ್ಧೆ ನಡೆಯಲಿದೆ.
ಫ್ಯಾನ್ಸಿ ಡ್ರೆಸ್ ಸ್ಪರ್ಧೆ: ಯಾವುದೇ ಒಬ್ಬ ಪ್ರಖ್ಯಾತ ಮಹಿಳೆಯ ವೇಷಭೂಷಣ ಸ್ಪರ್ಧೆ ಇದಾಗಿದೆ. ಗರಿಷ್ಠ 50 ಜನರಿಗೆ ಪ್ರವೇಶ ಅವಕಾಶವಿದೆ. ಬೆಳಗ್ಗೆ 9.30ಕ್ಕೆ ಸ್ಪರ್ಧೆ ನಡೆಯಲಿದೆ.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ