ಬೆಳ್ತಂಗಡಿ: ಚಾರ್ಮಾಡಿಯ ಮುಹಿದ್ದಿನ್ ಜುಮ್ಮಾ ಮಸೀದಿ ಧರ್ಮಗುರು ಜಾಲಾಲಿನಗರದ ಧರ್ಮಗುರು ಶಮೀರ್ ಮುಸ್ಲಿಯಾರ್(37) ಎಂಬುವರ ಮೇಲೆ ಸುಮಾರು 12 ಜನರ ತಂಡ ಹಲ್ಲೆ ನಡೆಸಿದೆ. ಮಸೀದಿಗೆ ಮಂಗಳವಾರ ರಾತ್ರಿ ನುಗ್ಗಿ ಹಲ್ಲೆ ಮಾಡಿದ್ದು, ಗಾಯಗೊಂಡ ಶಮೀರ್ ಮುಸ್ಲಿಯಾರ್ ಬೆಳ್ತಂಗಡಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರಾದ ಬದ್ರುದ್ದಿನ್, ಸಂಶುದ್ದೀನ್, ಅಹಮದ್ ಟಿ.ಬಿ.ರೋಡ್, ನೌಫಲ್, ಅನ್ಸರ್, ಮುನೀರ್ ಅಸೀಫ್, ಅಫೀಝ್, ಅಫ್ರೀಜ್, ಶರೀಫ್, ಅಬ್ದುಲ್ ಖಾದರ್ ಮತ್ತಿತರರು ಮಸೀದಿಗೆ ನುಗ್ಗಿ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಹಲ್ಲೆ ಬಳಿಕ ಮಸೀದಿ ಆವರಣದಲ್ಲಿ ಹಲ್ಲೆ ಮಾಡಿದ ತಂಡದವರು ಮತ್ತು ಮಸೀದಿಯವರ ಮಧ್ಯೆ ಗಲಾಟೆ ನಡೆದಿದ್ದು ವಿಡಿಯೋ ವೈರಲ್ ಅಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.