ಜಿಲ್ಲೆ

ಶೈಕ್ಷಣಿಕ ವಿಷಯಗಳಲ್ಲಿಯೂ ಕ್ರೀಡಾಪಟುಗಳ ಸಾಧನೆ

Avinash R

ಬಂಟ್ವಾಳ: ಕ್ರೀಡಾಪಟುಗಳು ಶೈಕ್ಷಣಿಕ ವಿಷಯಗಳಲ್ಲಿಯೂ ಸಾಧನೆ ಮಾಡಬೇಕು ಎಂದು ಮುಂಬೈ ಉದ್ಯಮಿ ಮುಂಡಪ್ಪ ಎಸ್.ಪಯ್ಯಡೆ ಹೇಳಿದರು.

ಜಿಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬಂಟ್ವಾಳ, ಕಲ್ಲಡ್ಕ ವಲಯ ಕ್ರೀಡಾಕೂಟ ಸಮಿತಿ ವತಿಯಿಂದ ಬಾಲವಿಕಾಸ ಆಂಗ್ಲಮಾಧ್ಯಮ ಶಾಲೆಯಲ್ಲಿ ಆಯೋಜಿಸಲಾದ ಬಂಟ್ವಾಳ ತಾಲೂಕುಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಮಾತನಾಡಿದರು.

ಮಾಣಿ ಬಾಲ ವಿಕಾಸ ಟ್ರಸ್ಟ್ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ. ಕ್ರೀಡಾಕೂಟ ಉದ್ಘಾಟಿಸಿದರು. ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆವಹಿಸಿ ಧ್ವಜಾರೋಹಣ ನೆರವೇರಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಪಥಸಂಚಲನಕ್ಕೆ ಚಾಲನೆ ನೀಡಿದರು. ನಿವೃತ್ತ ಜಿಲ್ಲಾ ದೈಹಿಕ ಶಿಕ್ಷಣ ಅಧೀಕ್ಷಕ ಗೋಪಾಲ್ ಎಚ್.ಎ. ಕ್ರೀಡಾಕೂಟದ ಪದಕ ಅನಾವರಣ ಮಾಡಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ಶಿವಪ್ರಸಾದ್ ರೈ ಪ್ರಾಸ್ತಾವಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ, ರಾಜ್ಯ ದೈಹಿಕ ಶಿಕ್ಷಣ ಸಂಘದ ಅಧ್ಯಕ್ಷ ರಾಜೇಂದ್ರ ರೈ, ಹರಿಪ್ರಸಾದ್, ಇಂದುಶೇಖರ್, ಚಿತ್ರಕಲಾ ಶಿಕ್ಷಕ ಸಂಘದ ಅಧ್ಯಕ್ಷ ಚೆನ್ನಕೇಶವ, ಜಿ.ಪಿ.ಟಿ. ಸಂಘದ ಅಧ್ಯಕ್ಷ ಗುರುರಾಜ ಎನ್, ಸಿ.ಆರ್.ಪಿ. ಸತೀಶ್ ರಾವ್, ಮುಖ್ಯಶಿಕ್ಷಕ ಸುಪ್ರಿಯಾ ಡಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ, ಸುಭಾಷಿಣಿ ಶೆಟ್ಟಿ ಉಪಸ್ಥಿತರಿದ್ದರು.

ಕಲ್ಲಡ್ಕ ವಲಯ ಕ್ರೀಡಾಸಮಿತಿ ಅಧ್ಯಕ್ಷ ಕಮಲಾಕ್ಷ ಸ್ವಾಗತಿಸಿದರು. ಕಾರ್ಯದರ್ಶಿ ಮಹೇಶ್ ಶೆಟ್ಟಿ ಸ್ಮರಣಿಕೆ ನೀಡಿದರು. ಯಜ್ಞೇಶ್ವರಿ ಎನ್, ಸುಧಾ ಎನ್.ರಾವ್ ನಿರೂಪಿಸಿದರು. ಜಗದೀಶ್ ಬಾಳ್ತಿಲ ವಂದಿಸಿದರು.