ಬದಿಯಡ್ಕ: ಮನೆಗೊಂದು ತುಳಸಿಕಟ್ಟೆ, ಊರಿಗೊಂದು ಅಶ್ವತ್ಥ ಕಟ್ಟೆ ಎಂಬ ಸಂಸ್ಕೃತಿಯ ಬೇರಿನಲ್ಲಿದೆ ವೈಜ್ಞಾನಿಕ ನಿಲುವು ಎಂದು ತೋಟಗಾರಿಕಾ ತಜ್ಞ ಅಕ್ಷಯರಾಮ ಕಾವಿನಮೂಲೆ ಅಭಿಪ್ರಾಯಪಟ್ಟರು.
ಶುಕ್ರವಾರ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ವಸಂತೋತ್ಸವ ಉದ್ಘಾಟಿಸಿ ಮಾತನಾಡಿದರು. ಯುವಪೀಳಿಗೆಯ ದೃಷ್ಟಿಕೋನ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಡೆಗೆ ವಾಲಿಕೊಂಡಿದೆ. ನಮಗೆಲ್ಲಾ ಉತ್ತಮ ಬದುಕು ಸಾಗಿಸಬೇಕಾದರೆ ಆರೋಗ್ಯದಾಯಕ ಪರಿಸರ ಅವಶ್ಯಕ ಎಂದರು.
ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದ ಡಾ.ವೈ.ವಿ.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಜಯಪ್ರಕಾಶ ಪಜಿಲ, ಶಾಲಾ ರಕ್ಷಕ ಶಿಕ್ಷಕ ಸಂಘ ಅಧ್ಯಕ್ಷ ಅನಂತಕೃಷ್ಣ ಚಡಗ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಪ್ರಾಸ್ತಾವಿಕ ಮಾತನಾಡಿದರು.
ಶಿವರಂಜನ್ ಬೇರ್ಕಡವು ಕೊಡಮಾಡುವ ಸ್ವರ್ಣಾಂಕುರ ಪ್ರಶಸ್ತಿ ಪ್ರತಿಭಾನ್ವಿತ ವಿದ್ಯಾರ್ಥಿನಿ ಧೃತಿ ಭಟ್ ಕೊರೆಕ್ಕಾನಗೆ ಪ್ರದಾನ ಮಾಡಲಾಯಿತು. ವಿಚಿತ್ರ ಏತಡ್ಕ ಸಾಂಸ್ಕೃತಿಕ ವೇದಿಕೆ ಕಾಸರಗೋಡು ಕೊಡಮಾಡುವ ದತ್ತಿನಿಧಿ ಡಾ.ಪ್ರಕಾಶ್ ವೈ.ಎಚ್.ಇಬ್ಬರು ವಿದ್ಯಾರ್ಥಿಗಳಿಗೆ ನೀಡಿದರು. ಶಾಲಾ ನಾಯಕಿ ನಿಹಾರಿಕಾ ಸ್ವಾಗತಿಸಿ, ಶಾಲಾ ನಾಯಕ ದಿಗಂತ್ ವಂದಿಸಿದರು. ಶ್ರೀಲಕ್ಷ್ಮೀ ನಿರೂಪಿಸಿದರು. ಶಿಕ್ಷಕಿ ಸರೋಜಾ ವಾರ್ಷಿಕ ವರದಿ ಮಂಡಿಸಿದರು. ರಶ್ಮಿ ಪೆರ್ಮುಖ ಹಾಗೂ ಸುಪ್ರೀತಾ ರೈ ವಳಮಲೆ ಸಾಧಕ ವಿದ್ಯಾರ್ಥಿಗಳ ವಿವರ ನೀಡಿದರು.