ಘಟನೆ ನಡೆದ ಸ್ಥಳ 
ಜಿಲ್ಲೆ

ಕರೆಂಟ್ ಬಿಲ್​ ಕೊಡುವ ನೆಪದಲ್ಲಿ ಬಂದವರು 'ಶಾಕ್' ಕೊಟ್ರು: ಆಮೇಲಾಗಿದ್ದೆಲ್ಲ ಭಯಂಕರ..

ಮಂಗಳೂರು: ಒಬ್ಬಂಟಿ ಮಹಿಳೆ ಇದ್ದ ಮನೆಗೆ ಕರೆಂಟ್ ಬಿಲ್ ಕೊಡುವ ನೆಪದಲ್ಲಿ ಬಂದಿದ್ದ ಆಗಂತುಕರು ಅಕ್ಷರಶಃ ಶಾಕ್ ಕೊಟ್ಟಿದ್ದಾರೆ. ಹಾಗೆ ಬಂದವರ ದುಷ್ಕೃತ್ಯಕ್ಕೆ ಮಹಿಳೆ ಆಘಾತಕ್ಕೆ ಒಳಗಾಗಿದ್ದಷ್ಟೇ ಅಲ್ಲ, ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗುವಂತಾಗಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಅಡ್ಡದ ಬೀದಿಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮನೆಯೊಂದರಲ್ಲಿ ನೆಲೆಸಿದ್ದ ಭೀಪಾತುಮ್ಮ ಎಂಬಾಕೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕರೆಂಟ್ ಬಿಲ್ ಕೊಡುವವರ ನೆಪದಲ್ಲಿ ಬಂದಿದ್ದ ಆಗಂತುಕರು, ಮಹಿಳೆ ಮೇಲೆ ಕತ್ತಿಯಿಂದ ಹಲ್ಲೆ ಮಾಡಿದ್ದಾರೆ. ನಂತರ ಮನೆಯಲ್ಲಿದ್ದ ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದಾರೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.