ಜಿಲ್ಲೆ

ಮಾವಿನ ಮರಕ್ಕೆ ಕಲ್ಲೆಸೆದುದೇಕೆ? ಎಂದು ಪ್ರಶ್ನಿಸಿದ ಮನೆಯ ಮಾಲೀಕನ ಮೇಲೆ ಹಲ್ಲೆ ನಡೆಸಿದ್ರು ಪುಂಡ ಬಾಲಕರು

Mysuru Rural

ಬೆಂಗಳೂರು: ವಿಶ್ವೇಶ್ವರಪುರದಲ್ಲಿ ಮನೆಯ ಮುಂದಿದ್ದ ಮಾವಿನಮರದಲ್ಲಿನ ಕಾಯಿ ಕೀಳುತ್ತಿದ್ದನ್ನು ಪ್ರಶ್ನಿಸಿದ ನಿವೃತ್ತ ಸರ್ಕಾರಿ ಅಧಿಕಾರಿ ಮತ್ತು ಪುತ್ರನ ಮೇಲೆ ಬಾಲಕರ ಗುಂಪು ಹಲ್ಲೆ ನಡೆಸಿದೆ.

ರಾಮ ಅಯ್ಯಂಗಾರ್ ರಸ್ತೆ ನಿವಾಸಿ ನಿವೃತ್ತ ಅಧಿಕಾರಿ ಬಿ.ಎಸ್. ಕೃಷ್ಣ ಮತ್ತು ಪುತ್ರ ಚೇತನ್ ಹಲ್ಲೆಗೆ ಒಳಗಾದವರು. ಹಲ್ಲೆ ನಡೆಸಿದ ಅಪ್ರಾಪ್ತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಬಂಧಿಸಲಾಗುತ್ತದೆ ಎಂದು ವಿಶ್ವೇಶ್ವರಪುರ ಪೊಲೀಸರು ತಿಳಿಸಿದ್ದಾರೆ.

ಏ.6ರ (ಸೋಮವಾರ) ಸಂಜೆ ರಾಮ ಅಯ್ಯಂಗಾರ್ ರಸ್ತೆಬದಿಯ ಮರದಲ್ಲಿ ಮಾವಿನಮರಕ್ಕೆ ಕಲ್ಲು ಎಸೆಯುತ್ತಿದ್ದ ಬಾಲಕರನ್ನು ಕೃಷ್ಣ ಹಾಗೂ ಚೇತನ್ ಪ್ರಶ್ನಿಸಿದಾಗ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.