ಜಿಲ್ಲೆ

ಕೋಟೇಕೇರಿ ದೇವಸ್ಥಾನದಲ್ಲಿ ಅಷ್ಠಮಂಗಲ ಪ್ರಶ್ನಾಚಿಂತನೆ

ಇಂದಿರಾ ಎನ್ ಕೆ

ಬ್ರಹ್ಮಾವರ: ಬಾರಕೂರು ಮಹಾತೋಭಾರ ಕೋಟೇಕೇರಿ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರದ ಕುರಿತು ದೈವಜ್ಞ ಪದ್ಮನಾಭ ಶರ್ಮ ಅವರಿಂದ ಅಷ್ಠಮಂಗಲ ಪ್ರಶ್ನಾಚಿಂತನೆ ನಡೆಯಿತು.

ದೇವಸ್ಥಾನ ಆಡಳಿತ ಮೊಕ್ತೇಸರ ಮಂಜುನಾಥ್ ರಾವ್, ವ್ಯವಸ್ಥಾಪನಾ ಸಮಿತಿ ದೈವಜ್ಞರನ್ನು ಬರಮಾಡಿಕೊಂಡರು.

ಬಳಿಕ ದೇವಸ್ಥಾನದ ಪ್ರಾಂಗಣದಲ್ಲಿ ಪೂಜಾ ಕಾರ್ಯ ನಡೆಯಿತು, ಕುಮಾರಿ ಅವನೀ ಸೋಮಯಾಜಿ ಇವರಿಂದ ಪ್ರಶ್ನಾಚಿಂತನೆಯ ಗ್ರಹಕುಂಡಲಿಗೆ ಸೂಚನೆ ನೀಡಿದಳು.

ಆನಂದ ಸಿ.ಕುಂದರ್, ಧಾರವಾಡದ ವಿಠಲ್ ಹೆಗ್ಡೆ, ಸುಗ್ಗಿ ಸುಧಾಕರಶೆಟ್ಟಿ, ಡಾ.ಆಕಾಶ್ ರಾಜ್ ಜೈನ್, ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಸ್ಥಳಿಯ ರಾಜಧಾನಿ ರಾಜ ಯುತ್ ಕ್ಲಬ್ ಸದಸ್ಯರು, ಸ್ಥಳೀಯ ಎಲ್ಲ ದೇವಸ್ಥಾನ ಸಂಘ ಸಂಸ್ಥೆಯವರು, ಗ್ರಾಮಸ್ಥರು ಉಪಸ್ಥಿತರಿದ್ದರು.