ರತ್ನಾಕರ ಶೆಣೈ  
ಜಿಲ್ಲೆ

ರತ್ನಾಕರ ಶೆಣೈಗೆ ಆರ್ಯಭಟ ಪ್ರಶಸ್ತಿ

ಹೆಬ್ರಿ: ಶಿವಪುರ ಗ್ರಾಮದ ರತ್ನಾಕರ ಶೆಣೈ ಅವರು ಯಕ್ಷಗಾನ ಹಾಗೂ ಸಮಾಜ ಸೇವೆಗೆ ಆರ್ಯಭಟ ಆರ್ಗನೈಜೇಷನ್ ನೀಡುವ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಹವ್ಯಾಸಿ ಯಕ್ಷಗಾನದ ಕಲಾವಿದರಾಗಿರುವ ಅವರು ಉಚಿತ ತರಬೇತಿ ನೀಡುವುದರ ಜತೆಗೆ ನೂರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಂದ ಗುರುತಿಸಿಕೊಂಡಿದ್ದಾರೆ. ಹಲವು ಅನಾಥಾಶ್ರಮದ ವಾಸಿಗಳಿಗೆ ಯಕ್ಷಗಾನ ಹಾಗೂ ಭಜನಾ ಕಾರ್ಯಕ್ರಮ ನೀಡಿದ್ದಾರೆ.