ಹೊಸಪೇಟೆಯಲ್ಲಿ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಅಂಗವಿಕಲರಿಗೆ ಉಚಿತ ಕೃತಕ ಕಾಲುಗಳನ್ನು ಜೋಡಣೆ ಮಾಡಲಾಯಿತು. 
ಜಿಲ್ಲೆ

ಕೃತಕ ಕೈ-ಕಾಲು ಜೋಡಣೆ ಶಿಬಿರ ಮುಕ್ತಾಯ

Gangavati - Desk - Veeresh S Ullagaddi

ಹೊಸಪೇಟೆ: ಇಲ್ಲಿನ ಸಹಕಾರಿ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಎಂಎಸ್‌ಪಿಎಲ್, ರಾಜಸ್ಥಾನದ ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಮೂರು ದಿನ ಹಮ್ಮಿಕೊಂಡಿದ್ದ ಉಚಿತ ಕೃತಕ ಕೈ ಮತ್ತು ಕಾಲು ಜೋಡಣೆ 11ನೇ ಶಿಬಿರ ಶುಕ್ರವಾರ ಮುಕ್ತಾಯಗೊಂಡಿತು

.
ಸಮಾರೋಪ ಸಮಾರಂಭದಲ್ಲಿ ಎಂಎಸ್‌ಪಿಎಲ್ ಸಂಸ್ಥೆಯ ಸಿಎಸ್‌ರ್ ವಿಭಾಗದ ಉಪಾಧ್ಯಕ್ಷ ಎಚ್.ಕೆ.ರಮೇಶ್ ಮಾತನಾಡಿ, ಕಳೆದ 10 ವರ್ಷಗಳಿಂದ ನಿರಂತರವಾಗಿ ಉಚಿತ ಕಾಲು ಜೋಡಣೆ ಶಿಬಿರ ನಡೆಸಲಾಗುತ್ತಿದೆ. ಈ ಬಾರಿ ಶಿಬಿರದಲ್ಲಿ ವಿಜಯನಗರ, ಬಳ್ಳಾರಿ, ಕೊಪ್ಪಳ ಹಾಗೂ ರಾಜ್ಯದ ವಿವಿಧೆಡೆಯಿಂದ ಆಗಮಿಸಿದ್ದ 200ಕ್ಕೂ ಹೆಚ್ಚು ಜನರು ಪ್ರಯೋಜನ ಪಡೆದಿದ್ದಾರೆ.

ಈ ಪೈಕಿ 150 ಜನರಿಗೆ ಕೃತಕ ಕಾಲು ಜೋಡಿಸಲಾಯಿತು. ಪೋಲಿಯೋಗೆ ಒಳಗಾಗಿದ್ದ 30 ಜನರಿಗೆ ಕ್ಯಾಲಿಫರ್, ಇನ್ನುಳಿದವರಿಗೆ ಊರುಗೋಲು, ಕೈ ಚಾಲಿತ ಸೈಕಲ್ ಮತ್ತು ಗಾಲಿ ಕುರ್ಚಿಗಳನ್ನು ಒದಗಿಸಿದ್ದು, ಫಲಾನುಭವಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಭಗವಾನ್ ಮಹಾವೀರ್ ಅಂಗವಿಕಲರ ಸಹಕಾರ ಸಮಿತಿ ಸ್ವಯಂ ಸೇವಕ ಅನಿಲ್ ಸುರಾನ, ಹೆಲ್ಪಿಂಗ್ ಹ್ಯಾಂಡ್ ಕಾರ್ಯದರ್ಶಿ ವೀಣಾ ಜೈನ್, ತಂತ್ರಜ್ಞರಾದ ಮಲ್ಲೇಶ, ಸುದೀಪ್, ಓಬಯ್ಯ ಇತರರಿದ್ದರು.