ಉಚಿತ ಆರೋಗ್ಯ ತಪಾಸಣೆ ಶಿಬಿರ ನಾಳೆ

Published on

ಕೆಂಭಾವಿ : ಸಮೃದ್ಧಿ ಸಹಕಾರ ಸಂಘ, ಸ್ಪಂದನ ಆಸ್ಪತ್ರೆ ಶಹಾಪುರ, ದೃಷ್ಟಿ ಕಣ್ಣಿನ ಆಸ್ಪತ್ರೆ, ಸನ್‌ರೈಸ್ ಆಸ್ಪತ್ರೆ ಕಲಬುರಗಿ ಮತ್ತು ಚಿಗುರು ಟ್ರಸ್ಟ್ ತುಮಕೂರ ಸಹಯೋಗದಲ್ಲಿ ಜು.೨೯ ಬೆಳಗ್ಗೆ ೧೧ರಿಂದ ಗುತ್ತಿಬಸವಣ್ಣ ದೇವಸ್ಥಾನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಸಹಕಾರ ಸಂಘದ ಅಧ್ಯಕ್ಷ ಭೀಮರಾಯ ಹೂವಿನಹಳ್ಳಿ ತಿಳಿಸಿದ್ದಾರೆ. ಆರೋಗ್ಯ ಸಮಸ್ಯೆ, ಕಣ್ಣಿನ ದೋಷ, ಎಲುಬು-ಕೀಲು ಸಮಸ್ಯೆ, ಮಕ್ಕಳ ಆರೋಗ್ಯ, ಸ್ತಿçÃರೋಗ ಸಮಸ್ಯೆ, ಚರ್ಮ ಮತ್ತು ಲೈಂಗಿಕ ಸಮಸ್ಯೆ ಸೇರಿ ಹಲವು ರೋಗಗಳಿಗೆ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಮತ್ತು ಮಾರ್ಗದರ್ಶನ ನೀಡಲಾಗುವುದು ಮತ್ತು ಉಚಿತವಾಗಿ ಔಷಧ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net