ತೆಂಗಿನ ಗೆರಟೆಯ ಕಲಾಕೃತಿಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮುಳ್ಳಿಕಟ್ಟೆ ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ನಡೆಯಿತು.  
ಜಿಲ್ಲೆ

ಕಲಾಕೃತಿಗಳ ತರಬೇತಿ ಶಿಬಿರ ಸಮಾರೋಪ

ಇಂದಿರಾ ಎನ್ ಕೆ

ಕುಂದಾಪುರ: ರೋಬೋಸಾಫ್ಟ್ ಟೆಕ್ನಾಲಜಿಸ್ ಮತ್ತು ಭಾರತೀಯ ವಿಕಾಸ ಟ್ರಸ್ಟ್ ಸಂಸ್ಥೆ ಮಾರ್ಗದರ್ಶನದಲ್ಲಿ ಮುಳ್ಳಿಕಟ್ಟೆಯ ಶುಭಂ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ತೆಂಗಿನ ಗೆರಟೆಯ ಕಲಾಕೃತಿಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಮುಳ್ಳಿಕಟ್ಟೆಯ ಶುಭಂ ಶೈಕ್ಷಣಿಕ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತರಬೇತಿ ಕೇಂದ್ರದಲ್ಲಿ ಸೋಮವಾರ ನಡೆಯಿತು.

ಶುಭಂ ಸಂಸ್ಥೆಯ ಸಂಚಾಲಕ ಶ್ರೀಧರ್ ಹೆಗ್ಡೆ ಶುಭಹಾರೈಸಿದರು. ತರಬೇತುದಾರರಾದ ರೂಪಾ ರಾವ್, ರಾಘವೇಂದ್ರ ಆಚಾರ್ಯ, ರವಿ ಆಚಾರ್, ಮನೋರಮಾ ಉಪಸ್ಥಿತರಿದ್ದರು. ಕನಕ, ಸೀತಾ ವಸಂತಿ, ರಶ್ಮಿ, ಕಾರ್ಮಿನ್ ಅನುಭವ ಹಂಚಿಕೊಂಡರು.

ಶುಭಂ ಸಂಸ್ಥೆಯ ಗಿರಿಜಾ, ಜ್ಯೋತಿ ಹಾಗೂ ವಿದ್ಯಾರ್ಥಿನಿ ಸಿಂಚನ ಸಹಕರಿಸಿದರು. ವಸಂತಿ ವಂದಿಸಿದರು. ಶರಣ್ಯ ಮತ್ತು ಸಂಜನಾ ಕಾರ್ಯಕ್ರಮ ನಿರೂಪಿಸಿದರು. ಮೂವತ್ತು ಫಲಾನುಭವಿಗಳು ತರಬೇತಿ ಪ್ರಯೋಜನ ಪಡೆದರು.