ತಾವರಗೇರಾ: ಸಮೀಪದ ಜುಮಲಾಪೂರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಗಾನಯೋಗಿ ಸಂಗೀತ ಕಲಾ ಸಂಸ್ಥೆ ಸಹಯೋಗದಲ್ಲಿ ಸಂಗೀತ ಕಾರ್ಯಕ್ರಮ ಬುಧವಾರ ರಾತ್ರಿ ನಡೆಯಿತು.
ಪಿಡಿಒ ಗುರಣ್ಣನಾಯಕ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದ ಕಡೆಗೆ ಯುವ ಪೀಳಿಗೆ ಹೋಗುತ್ತಿದ್ದು, ಸ್ವದೇಶಿ ಸಂಗೀತ ಉಳಿಸಬೇಕಿದೆ. ನೆಲ, ಜಲ, ಸಂಸ್ಕೃತಿ, ಕಲೆ ಮತ್ತು ಕಲಾವಿದರನ್ನು ಗೌರವಿಸುವ ಕೆಲಸವಾಗಬೇಕಿದೆ ಎಂದರು.
ಮಲ್ಲಯ್ಯ ಶಾಸ್ತ್ರಿ ಹಿರೇಮಠ ಸಪ್ತ ಸ್ವರಗಳ ಬಗ್ಗೆ ವಿವರಿಸಿದರು. ಕಲಾವಿದ ಶರಣಬಸವ ಚನ್ನದಾಸರ, ಪ್ರಮುಖರಾದ ಮಂಜುನಾಥ ಕಟ್ಟಿಮನಿ, ಅನ್ನಪ್ಪ ಕಟ್ಟಿಮನಿ ಲಿಂಗಪ್ಪ ಕುರಿ, ಸಂಜೀವಪ್ಪ ಹೂಗಾರ, ಮಹದೇವಪ್ಪ, ತಿಮ್ಮಣ್ಣ ಗುತ್ತೇದಾರ, ಚಂದ್ರಶೇಖರಶೆಟ್ಟಿ ಇದ್ದರು.