ಜಿಲ್ಲೆ

ಇಬ್ಬರು ದನಕಳ್ಳರ ಬಂಧನ

ಇಂದಿರಾ ಎನ್ ಕೆ

ಬೈಂದೂರು: ಶಿರೂರು ಪೇಟೆಯಲ್ಲಿ ಮಲಗಿದ್ದ ಗೋವುಗಳನ್ನು ಕದ್ದೊಯ್ದ ಇಬ್ಬರು ಆರೋಪಿಗಳನ್ನು ಹಾಲಾಡಿ ರಸ್ತೆ ಕೊಟೇಶ್ವರ ಸನ್‌ರೈಸ್ ಫ್ಯಾಕ್ಟರಿ ಬಳಿ ಬೈಂದೂರು ಪೋಲಿಸರು ಬಂಧಿಸಿದ್ದಾರೆ. ಕುಂದಾಪುರ ಕೋಡಿ ಕಸ್ಬಾ ನಿವಾಸಿಗಳಾದ ಅಬ್ದುಲ್ ಸಮಾದ್(27), ಅಬ್ದುಲ್ ರೆಹಮಾನ್(25) ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಉಪಯೋಗಿಸಿದ ಕಾರು, ಮೊಬೈಲ್, ಚೂರಿ ವಶಕ್ಕೆ ಪಡೆಯಲಾಗಿದೆ. ಒಟ್ಟು 9.10 ಲಕ್ಷ ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ.