ಜಿಲ್ಲೆ

ಜುಗಾರಿ ನಡೆಸುತ್ತಿದ್ದವನ ಬಂಧನ

ಸೌಮ್ಯ ಆರ್

ಗಂಗೊಳ್ಳಿ: ಕುಂದಾಪುರ ತಾಲೂಕು ತ್ರಾಸಿ ಗ್ರಾಮದ ಹೊಸಪೇಟೆ ಕ್ರಾಸ್‌ನಿಂದ ಸ್ವಲ್ಪ ದೂರದಲ್ಲಿ ಇರುವ ಮರದ ಬಳಿ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ಬಗ್ಗೆ ತ್ರಾಸಿ ಗ್ರಾಮದ ಬೀಟ್ ಸಿಬ್ಬಂದಿ ನೀಡಿದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಗಂಗೊಳ್ಳಿ ಠಾಣೆ ಪೊಲೀಸರು ಗುಜ್ಜಾಡಿ ಗ್ರಾಮದ ಮಧುಕರ ಮೇಸ್ತ ಎಂಬುವವರನ್ನು ಬಂಧಿಸಿ, 1985 ರೂ.ನಗದು ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.