ಕಾಸರಗೋಡು: ಆದೂರು ಪೊಲೀಸ್ ಠಾಣೆ ವ್ಯಾಪ್ತಿಯ ಪೊವ್ವಲ್‌ನಲ್ಲಿ ಗೃಹಿಣಿಯೊಬ್ಬರು ಮಗನಿಂದಲೇ ಕೊಲೆಗೀಡಾಗಿದ್ದಾರೆ. ಪೊವ್ವಲ್ ಪೆಟ್ರೋಲ್ ಪಂಪ್ ಸನಿಹದ ನಿವಾಸಿ ಅಬ್ದುಲ್ಲಕುಞಿ ಅವರ ಪತ್ನಿ ನಫೀಸಾ(62) ಕೊಲೆಗೀಡಾದವರು. ಪ್ರಕರಣಕ್ಕೆ ಸಂಬಂಧಿಸಿ ಪುತ್ರ ನಾಸರ್ ಎಂಬಾತನನ್ನು ಆದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ತಾಯಿಗೆ ಹಲ್ಲೆಗೈಯುವುದನ್ನು ತಡೆಯಲು ಯತ್ನಿಸಿದ್ದ ಹಿರಿಯ ಪುತ್ರ ಮಜೀದ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಪಿ ನಾಸರ್‌ನನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದೆ.