ದೇವದುರ್ಗದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗದಿಂದ ಪುನಿತ್ ರಾಜ್‌ಕುಮಾರ ಪುಣ್ಮ ಸ್ಮರಣೆ ನಿಮಿತ್ತ ಯುವಕರಿಗೆ ಪುನಿತ್ ರಾಜ್‌ಕುಮಾರ ಫೋಟೋ ನೀಡಲಾಯಿತು. ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ, ಮುಖಂಡರಾದ ತಿರುಪತಿ ಚೇರ್ಮನ್, ದಂಡಪ್ಪ, ರಮೇಶ, ಶೇಖರಪ್ಪ ಶಿರ್ವಾಳ, ಇಕ್ಬಾಲ್ ಸಾಬ್ ಅರಕೇರಾ, ರಾಜಣ್ಣ ಟೈಲರ್, ಗುಂಡಪ್ಪ ಇತರರಿದ್ದರು. 
ಜಿಲ್ಲೆ

ಪುನಿತ್ ರಾಜ್‌ಕುಮಾರ ಮರೆಯದ ಮಾಣಿಕ್ಯ

Kopala - Desk - Eraveni

ದೇವದುರ್ಗ: ದಿ.ಪುನಿತ್ ರಾಜ್‌ಕುಮಾರ ಅಭಿಮಾನಿಗಳು ಅವರನ್ನು ಕೇವಲ ನಟನಾಗಿ ಆರಾಧಿಸುತ್ತಿಲ್ಲ. ಸಮಾಜದ ಕಳಕಳಿಗೆ ಮಿಡಿದ ಹೃದಯವಂತ. ಹೀಗಾಗಿ ಪುನಿತ್ ಮರೆಯದ ಮಾಣಿಕ್ಯರಾಗಿ ಜನರ ಮನಸ್ಸಿನಲ್ಲಿ ಬೇರೂರಿದ್ದಾರೆ ಎಂದು ಕಸಾಪ ತಾಲೂಕು ಅಧ್ಯಕ್ಷ ಎಚ್.ಶಿವರಾಜ ಹೇಳಿದರು.

ಪಟ್ಟಣದ ಇಂದಿರಾ ಕ್ಯಾಂಟಿನ್ ಮುಂದೆ ಸಮಾನ ಮನಸ್ಕರ ಗೆಳೆಯರ ಬಳಗ ಹಾಗೂ ಸವಿತಾ ಸಮಾಜದಿಂದ ಆಯೋಜಿಸಿದ್ದ ದಿ.ಪುನಿತ್ ರಾಜ್‌ಕುಮಾರರ 2ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಪುನಿತ್ ರಾಜ್‌ಕುಮಾರ ಸಮಾಜದ ನೋವುಗಳಿಗೆ ಸದಾ ಕಾಲ ಸ್ಪಂದಿಸುತ್ತಿದ್ದರು.

ಕರೊನಾ ಸಂಕಷ್ಟ ಸಮಯದಲ್ಲಿ ಸರ್ಕಾರಕ್ಕೆ 50ಲಕ್ಷ ರೂ. ದೇಣಿಗೆ ನೀಡಿ ಎಲ್ಲರ ಹೃದಯ ಗೆದ್ದಿದ್ದರು. ಸಮಾಜಸೇವೆಯಲ್ಲಿ ನಿರಂತರ ತೊಡಿಗಿಸಿಕೊಂಡಿದ್ದಾರು. ತಂದೆಯಂತೆ ಪುನಿತ್ ಸಿನಿಮಾಗಳಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ.

ಹೀಗಾಗಿ ಅವರನ್ನು ಅಭಿಮಾನಿಗಳು ದೇವರಂತೆ ಪೂಜಿಸುತ್ತಾರೆ. ಪುನಿತ್ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದರು. ಮುಖಂಡರಾದ ತಿರುಪತಿ ಚೇರ್ಮನ್, ದಂಡಪ್ಪ, ರಮೇಶ, ಶೇಖರಪ್ಪ ಶಿರ್ವಾಳ, ಇಕ್ಬಾಲ್ ಸಾಬ್ ಆರಕೆರ, ರಾಜಣ್ಣ ಟೈಲರ್, ಗುಂಡಪ್ಪ ಇತರರಿದ್ದರು.