ಕಾಸರಗೋಡು: ಅಯ್ಯಂಕಾಳಿ ಸ್ಮಾರಕ ಟ್ಯಾಲೆಂಟ್ ಸರ್ಚ್ ಆ್ಯಂಡ್ ಡೆವಲಪ್‌ಮೆಂಟ್ ಯೋಜನೆಯನ್ವಯ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿಯಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು.2024-25ನೇ ಶೈಕ್ಷಣಿಕ ವರ್ಷದಲ್ಲಿ 5ಮತ್ತು 8ನೇ ತರಗತಿಯಲ್ಲಿ ಓದುತ್ತಿರುವ ಹಾಗೂ 4 ಮತ್ತು 7ನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಎಲ್ಲ ವಿಷಯಗಳಲ್ಲಿ ಎ ಗ್ರೇಡ್ ಪಡೆದಿರುವ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕುಟುಂಬದ ವಾರ್ಷಿಕ ಆದಾಯ 1ಲಕ್ಷ ರೂ.ಮೀರಿರಬಾರದು. ಜಾತಿ-ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್, 4 ಮತ್ತು 7ನೇ ತರಗತಿ ಅಂಕಪಟ್ಟಿ ಪ್ರತಿ (ಮುಖ್ಯಶಿಕ್ಷಕರಿಂದ ದೃಢೀಕೃತ)ಮತ್ತು ಆದ್ಯತೆ ಸಾಬೀತುಪಡಿಸುವ ದಾಖಲೆಗಳೊಂದಿಗೆ ಡಿ.10ರೊಳಗೆ ಅರ್ಜಿಯನ್ನು ಪರಪ್ಪ ಪರಿಶಿಷ್ಟ ವರ್ಗ ಅಭಿವೃದ್ಧಿ ಕಚೇರಿ ಅಥವಾ ಪನತ್ತಡಿ ಮತ್ತು ಭೀಮನಡಿ ಪರಿಶಿಷ್ಟ ವರ್ಗ ವಿಸ್ತರಣಾ ಕಚೇರಿಗಳಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0467 2960111ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.