ಕಾಸರಗೋಡು: ’ರಿಕನೆಕ್ಟಿಂಗ್ ಯೂತ್’ ಜಿಲ್ಲಾ ಮಟ್ಟದ ಮಾದಕ ದ್ರವ್ಯ ವಿರೋಧಿ ಅಭಿಯಾನದ ಉದ್ಘಾಟನೆ ನೆಲ್ಲಿಕಟ್ಟೆಯ ಪಿಬಿಎಂ ಆಂಗ್ಲ ಮಾಧ್ಯಮ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಯಿತು. ಪ್ರಿನ್ಸಿಪಲ್ ಜಿಲ್ಲಾ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಾನು ಎಸ್.ಪಣಿಕ್ಕರ್ ಅಭಿಯಾನ ಉದ್ಘಾಟಿಸಿ, ಶಾಲಾ ವಠಾರದಲ್ಲಿ ಅಳವಡಿಸಲಾದ ದೂರು ಪೆಟ್ಟಿಗೆ ಅನಾವರಣಗೊಳಿಸಿದರು.
ಶಾಲಾಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಇಬ್ರಾಹಿಂ ನೆಲ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ರುಕ್ಮಾ ಎಸ್.ರಾಜ್, ಡಿವೈಎಸ್ಪಿ ಸಿ.ಸುನೀಲ್ ಕುಮಾರ್ ಉಪಸ್ಥಿತರಿದ್ದರು.
ಪಿಬಿಎಂ ಜಿಎಚ್‌ಎಸ್‌ಎಸ್ ಪ್ರಾಂಶುಪಾಲ ನಿಜಾಮ್ ಬೋವಿಕಾನಂ ಸ್ವಾಗತಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ವಿಭಾಗಾಧಿಕಾರಿ ಎ.ಪಿ.ಕೇಶವನ್ ವಂದಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಟ್ಟದ ಮಾದಕ ವಸ್ತು ವಿರೋಧಿ ಅಭಿಯಾನ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
\https://www.vijayavani.net/guruthathva-malike