ಕೋಟ: ಇನ್‌ಸ್ಟಿಟ್ಯೂಟ್ ಅಫ್ ಕರಾಟೆ ಆ್ಯಂಡ್ ಅಲೈಡ್ ಆರ್ಟ್ಸ್‌ನ ವತಿಯಿಂದ ಇತ್ತೀಚೆಗೆ ಸುರತ್ಕಲ್‌ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಸಾಸ್ತಾನ ಸೇಂಟ್ ಅಂಥೋನಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳಾದ ಆಯಿರಾನಜ್, ಸ್ಪಂದನಾ ಚಡಗ, ನವೀನಕೃಷ್ಣ, ರಂಜನ್.ಜೆ ಪೂಜಾರಿ, ಅಶ್ವಿಲ್ ಡಿಸಿಲ್ವ, ಉತ್ತಮ್, ಪ್ರಥಮ್, ವಿಶಾಂತ್, ಪ್ರಶ್ಮಾ ವಿ ಪೂಜಾರಿ, ಸದ್ವಿತ್ ಎಸ್.ಕುಮಾರ, ಅಬ್ದುಲ್ ಮುಜಿತ್ ವಿಜೇತರಾಗಿದ್ದಾರೆ. ಚರ್ಚ್‌ನ ಕರೆಸ್ಪಾಂಡೆಂಟ್ ಸುನೀಲ್ ಡಿಸಿಲ್ವ್ವ, ಮುಖ್ಯಶಿಕ್ಷಕಿ ಅನಿತಾ ಅಲ್ಮೈಡ್, ದೈಹಿಕ ಶಿಕ್ಷಕ ಉಮಾಪತಿ, ಕರಾಟೆ ಶಿಕ್ಷಕ ಜಗನ್ನಾಥ ಅಮೀನ್ ಕೋಡಿ ಉಪಸ್ಥಿತರಿದ್ದರು.