ಜಿಲ್ಲೆ

ಸಿದ್ದಾಪುರ-ಮಂಗನ ಕಾಯಿಲೆಗೆ ಮತ್ತೊಂದು ಬಲಿ!

Uttara Kannada - Subash Hegde

ಸಿದ್ದಾಪುರ: ಮಂಗನ ಕಾಯಿಲೆ ತಾಲೂಕಿನಲ್ಲಿ ವ್ಯಾಪಕವಾಗಿದ್ದು, ಮತ್ತೊಂದು ಬಲಿ ಪಡೆದಿದೆ.

ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾಲೂಕಿನ ಬಾಲಕಿಯೊಬ್ಬಳು ಕೊನೆಯುಸಿರೆಳೆದಿದ್ದಾಳೆ. ಆಕೆಯ ತಾಯಿಗೂ ಕೆಎಫ್ ಡಿ ಕಾಣಿಸಿಕೊಂಡಿದ್ದು, ಗುಣಮುಖಳಾಗುತ್ತಿದ್ದಾಳೆ.

ಈ ವರ್ಷ ಇದುವರೆಗೆ ಸಿದ್ದಾಪುರದಲ್ಲಿ 5 ಜನ ಕೆಎಪ್ ಡಿ ಕಾಯಿಲೆಯಿಂದ ಮೃತಪಟ್ಟಿದ್ದಾರೆ. 72 ಜನರಲ್ಲಿ ರೋಗ ಕಾಣಿಸಿಕೊಂಡಿದೆ.

ಮಾತ್ರವಲ್ಲ ಜಿಲ್ಲೆಯ ಶಿರಸಿಯಲ್ಲೂ ರೋಗ ಕಾಣಿಸಿಕೊಂಡಿದ್ದು, ಒಂದು ಸಾವಾಗಿದೆ. ಅಂಕೋಲಾ‌, ಜೊಯಿಡಾ ತಾಲೂಕುಗಳಿಗೂ ಕಾಯಿಲೆ ವ್ಯಾಪಿಸಿದೆ.