More

    ಕಾರವಾರ ನಗರದಲ್ಲಿ ಚಿರತೆ ವಾಕಿಂಗ್, ಜನ ಶಾಕಿಂಗ್ !!

    ಕಾರವಾರ: ಚಿರತೆಗಳು ಕಾಡು ಬಿಟ್ಟು ನಾಡಿಗೆ ಬರಲಾರಂಭಿಸಿವೆ.
    ಬೇಸಿಗೆಯ ನೀರಿನ ಕೊರತೆ, ಬೇಟೆಯ ಕೊರತೆಯಿಂದ ಅವರು ಶಹರದಲ್ಲಿ ಓಡಾಡತೊಡಗಿವೆ.

    ಎರಡು ದಿನದ ಹಿಂದೆ ಕುಮಟಾದಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಯಲ್ಲಾಪುರದಲ್ಲಿ ಇನ್ನೊಂದು ಚಿರತೆ ಬಾವಿಗೆ ಬಿದ್ದಿತ್ತು. ಈಗ ಕಾರವಾರದ ಸರದಿ.

    ಕಾರವಾರ ನಗರದ ನಟ್ಟ ನಡುವೆ ನಡುವೆ ಇರುವ ಕಳಸವಾಡದ ಜನನಿಬಿಡ ಪ್ರದೇಶದಲ್ಲಿ, ರಾತ್ರಿ 11 ಗಂಟೆ ಸುಮಾರಿಗೆ ಚಿರತೆಯೊಂದು ಕಾಣಿಸಿಕೊಂಡಿದೆ.
    ಮಧ್ಯವಯಸ್ಕ ಚಿರತೆ ಕಂಪೌಂಡ್ ಹಾರಿ, ರಸ್ತೆ ದಾಟಿ, ಇನ್ನೊಂದು ಕಂಪೌಂಡಚ ತಲುಪುವ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದೆ.
    ಚಿರತೆ ಸುಳಿವು ತಿಳಿದ ಬೆಕ್ಕೊಂದು ಓಡಿ ಪರಾರಿಯಾಗುತ್ತದೆ. ಚಿರತೆ ರಸ್ತೆ ದಾಟಿದ ಎರಡೇ ನಿಮಿಷದಲ್ಲಿ ವ್ಯಕ್ತಿಯೊಬ್ಬ ಬೈಕ್ ಮೇಲೆ ಬರುವುದು ಕಾಣಿಸುತ್ತದೆ.
    ಮಕ್ಕಳು, ಜನರು ಓಡಾಡುವ ಪ್ರದೇಶದಲ್ಲಿ ಚಿರತೆ ಓಡಾಟ ಆತಂಕ ಹುಟ್ಟಿಸಿದ ಅರಣ್ಯ ಇಲಾಖೆ ಸೂಕ್ತ ಕ್ರಮ ವಹಿಸಬೇಕಯ ಎಂದು ಕಳಸವಾಡ ನಿವಾಸಿ ಶುಭಂ ಕಳಸ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಉತ್ತರ ಕನ್ನಡ ತಲುಪಿದ ಡಿಸಿಎಂ ಡಿ.ಕೆ.ಶಿವಕುಮಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts