ಬೆಂಗಳೂರು: ಸಿಡಿ ಕೇಸ್ ಸಂಬಂಧ ರಮೇಶ್ ಜಾರಕಿಹೊಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಇಂದು(ಶನಿವಾರ) ಮತ್ತೊಂದು ದೂರು ಬಂದಿದೆ.
ನಿನ್ನೆ ವಿಡಿಯೋ ಮೂಲಕ ದಿಢೀರ್ ಕಾಣಿಸಿಕೊಂಡಿದ್ದ ಸಿಡಿ ಲೇಡಿ, ತನ್ನ ವಕೀಲರ ಮೂಲಕ ರಮೇಶ್ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಕೆಲಸ ಕೊಡಿಸುವ ಭರವಸೆ ನೀಡಿ ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದಾರೆ. ಜೀವ ಬೆದರಿಕೆ ಇದೆ ಎಂದು ದೂರಿನಲ್ಲಿ ವಿವರಿಸಿದ್ದಳು. ನಿನ್ನೆ ದಾಖಲಾದ ಕೇಸ್ನಲ್ಲಿ ರಮೇಶ್ ಬಂಧನ ಭೀತಿಯಲ್ಲಿರುವಾಗಲೇ ಅವರ ವಿರುದ್ಧ ಮತ್ತೊಂದು ದೂರು ಬಂದಿದೆ. ಇದನ್ನೂ ಓದಿರಿ ಸಿಡಿ ಕೇಸ್ಗೆ ಸ್ಫೋಟಕ ತಿರುವು: ಸತ್ಯ ಒಪ್ಪಿಕೊಂಡ ಡಿಕೆಶಿ
ಸಿಡಿ ಕೇಸ್ನ ಯುವತಿ ಇಂದು ಬಿಡುಗಡೆ ಮಾಡಿದ ನಾಲ್ಕನೇ ವಿಡಿಯೋದಲ್ಲೂ ತನಗೆ ಜೀವ ಬೆದರಿಕೆ ಇದೆ ಎಂದು ಅಳಲುತೋಡಿಕೊಂಡಿದ್ದಳು. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಇಂದು ಮಧ್ಯಾಹ್ನ ತೆರಳಿದ ಯುವತಿ ಪರ ವಕೀಲ ಜಗದೀಶ್, ರಮೇಶ್ ವಿರುದ್ಧ ಜಿವ ಬೆದರಿಕೆ ಕೇಸ್ ದಾಖಲಿಸಿದ್ದಾರೆ.
ಎಸ್ಐಟಿ ವಿಚಾರಣೆ ಬಳಿಕ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಅವಕಅಶ ಕೊಡುವಂತೆ ಕೋರಿ ವಕೀಲ ಜಗದೀಶ್, ಆಡುಗೋಡಿಯ ಟೆಕ್ನಿಕಲ್ ಸೆಲ್ನತ್ತ ತೆರಳಿದ್ದಾರೆ.