ಜಿಲ್ಲೆ

ಬೆಳಾಲು ಆರಿಕೋಡಿ ಕ್ಷೇತ್ರದಲ್ಲಿ ವಾರ್ಷಿಕ ಉತ್ಸವ ಸಂಪನ್ನ

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು.

ಪುಣ್ಯಾಹ, ಶುದ್ಧಿ, ದೇವತಾ ಪ್ರಾರ್ಥನೆ, ಗಣಪತಿಹೋಮ, ಮೃತ್ಯುಂಜಯ ಹೋಮ, ನವಗ್ರಹ ಶಾಂತಿ ಹೋಮ, ಕಲಶ ಪೂಜೆ, ಮಹಾ ಪೂಜೆ, ಸಂಜೆ ಸುದರ್ಶನ ಹೋಮ, ವಾಸ್ತು ರಾಕ್ಷಾಘ್ನ ಹೋಮ, ವಾಸ್ತು ಪೂಜೆ, ವಾಸ್ತು ಬಲಿ ಮಹಾಪೂಜೆ ನಡೆಯಿತು.

ಸ್ವಾತಿ ಜಯರಾಮ್, ಪೃಥ್ವಿ ಸತೀಶ್ ಶಿಷ್ಯ ವೃಂದದಿಂದ ನೃತ್ಯಾರ್ಪಣ, ಪುತ್ತೂರು ಜಗದೀಶ್ ಆಚಾರ್ಯ ಬಳಗದವರಿಂದ ಸಂಗೀತ ಗಾನ ಸಂಭ್ರಮ, ವಿವಿಧ 114 ಭಜನಾ ತಂಡಗಳಿಂದ ಕುಣಿತ ಭಜನಾ ಕಮ್ಮಟೋತ್ಸವ ನಡೆಯಿತು.

ಶ್ರೀ ನಾಗದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಮಹಾ ಚಂಡಿಕಾಯಾಗ, ಲಲಿತ ಸಹಸ್ರನಾಮ, ಕದಳಿಯಾಗ, ಕಲಶಾಭಿಷೇಕ, ಮಹಾಪೂಜೆ, ಸಂಜೆ ಆಶ್ಲೇಷಬಲಿ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದುರ್ಗಾಪೂಜೆ, ಚಾಮುಂಡೇಶ್ವರಿ ಅಮ್ಮನವರಿಗೆ ರಂಗಪೂಜೆ, ದಿನೇಶ್ ಕೋಡಪದವು ಸಾರಥ್ಯದಲ್ಲಿ ಹಾಸ್ಯ ಕಲಾವಿದರಿಂದ ಯಕ್ಷ ತೆಲಿಕೆ ಹಾಸ್ಯ ವೈಭವ, ಸ್ಥಳೀಯ ಶಾಲಾ ಮಕ್ಕಳಿಂದ ಮತ್ತು ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಉಜಿರೆ ಮಂದಾರ ಕಲಾವಿದರಿಂದ ಮಾಯೊದ ತುಡರ್ ನಾಟಕ ಪ್ರದರ್ಶನ ಗೊಂಡಿತು.ನಾಗ ದೇವರಿಗೆ ನಾಗತಂಬಿಲ, ಶ್ರೀ ಚಾಮುಂಡೇಶ್ವರಿ ದೇವಿಗೆ ಕಲಶ ಪೂಜೆ ಪ್ರಧಾನ ಹೋಮ, ಪರಿವಾರ ಪೂಜೆ, ಕಲಶಾ ಭಿಷೇಕ, ಮಹಾಪೂಜೆ, ರಾತ್ರಿ ಶ್ರೀ ಚಾಮುಂಡೇಶ್ವರಿ ದೇವಿಯ ವಾರ್ಷಿಕ ಉತ್ಸವ, ಚಾಮುಂಡೇಶ್ವರಿ ಮತ್ತು ಗುಳಿಗ ನೇಮೋತ್ಸವ, ಮಧ್ಯಾಹ್ನ ಮಹಾಪೂಜೆ ರಾತ್ರಿ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಬಯಲಾಟ ನಡೆಯಿತು. ರಾತ್ರಿ ಕ್ಷೇತ್ರದ ಪರಿವಾರ ದೈವಗಳಾದ ಕಲ್ಲುರ್ಟಿ, ಮಂತ್ರ ದೇವತೆ, ಸನ್ಯಾಸಿ ಗುಳಿಗ, ಶಕ್ತಿ ಗುಳಿಗ ಹಾಗೂ ಇತರ ದೈವಗಳಿಗೆ ನೇಮೋತ್ಸವ ನಡೆಯಿತು.

ಧರ್ಮದರ್ಶಿ ಹರೀಶ್ ಆರಿಕೋಡಿ, ಆಡಳಿತ ಮೋಕ್ತೇಸರ ಡೊಂಬಯ್ಯ ಗೌಡ, ಆಡಳಿತ ಮಂಡಳಿ ಅಧ್ಯಕ್ಷರು, ಸಿಬ್ಬಂದಿ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.