ಜಿಲ್ಲೆ

ಮಧ್ವವಾದಿರಾಜ ಸಂಸ್ಥೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಶಿರ್ವ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಕ್ರೀಯೇಟಿವ್ ಎಜುಕೇಶನ್ ಫೌಂಡೇಶನ್ ಸಹಸಂಸ್ಥಾಪಕ ಡಾ.ಬಿ.ಗಣನಾಥ ಶೆಟ್ಟಿ ಉದ್ಘಾಟಿಸಿದರು.

ಪ್ರಾಂಶುಪಾಲ ಡಾ.ತಿರುಮಲೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ರತ್ನಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕ ಪೌಲ್ ಸೂರಜ್, ವಿವಿಧ ವಿಭಾಗದ ಮುಖ್ಯಸ್ಥರು ಸಹಿತ ಇತರರು ಉಪಸ್ಥಿತರಿದ್ದರು. ನಿರಾಮಯ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸ್‌ನ ವಿದ್ಯಾರ್ಥಿಗಳ ತಂಡ ಉತ್ತಮ ಪಥಸಂಚಲನ ತಂಡ ಪ್ರಶಸ್ತಿ ಪಡೆದುಕೊಂಡಿತು. ಕ್ರೀಡಾ ಕಾರ್ಯದರ್ಶಿ ಸಮೀಕ್ಷಾ ಕ್ರೀಡಾ ಪ್ರತಿಜ್ಞೆ ವಿಧಿ ಬೋಧಿಸಿದರು. ಅಭಿಷೇಕ್ ವಂದಿಸಿದರು.